ಉಡುಪಿ, ಫೆ 23 (DaijiworldNews/HR): ಅಪರಿಚಿತ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂಬುದಾಗಿ ನಂಬಿಸಿ ಮಹಿಳೆ ಒಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ಬೆಳಕೆಗೆ ಬಂದಿದೆ.
ಉಡುಪಿಯ ಮಲ್ಲೆ ಮೂಲದ ವಿನಿತಾ ಎಂಬವರು ಕಂಪೆನಿಯಲ್ಲಿ ಬಿಸಿನೆಟಸ್ ಪಾರ್ಟ್ನರ್ ಆಗಿ ಕೆಲಸ ಮಾಡಿಕೊಂಡಿದ್ದು, ಬಿಸಿನೆಸ್ ಮುಂದುವರೆಸುವ ಬಗ್ಗೆ ಇಂಟರ್ನೆಟ್ ಕನೆಕ್ಷನ್ ಮಾಡಿಕೊಂಡಿರುವುದಾಗಿದೆ. 2024 ರ ಜನವರಿಯ 24 ರಂದು ಅಪರಿಚಿತ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂಬುದಾಗಿ ಪರಿಚಯ ಮಾಡಿಕೊಂಡು ವಾಟ್ಸ್ಯಾಪ್ ಮೂಲಕ ಚಾಟ್ ಮಾಡಿಕೊಂಡಿತ್ತಾನೆ. ನಂತರ ಆತನು ಲಂಡನ್ನಿಂದ ಭಾರತಕ್ಕೆ ಬರುವುದಾಗಿ ಹೇಳಿದ್ದು, ಫೆಬ್ರವರಿ 02ರಂದು ಬೆಳಿಗ್ಗೆ 10:30 ಗಂಟೆಗೆ ವಿನಿತಾ ರವರಿಗೆ ಬೇರೆಯೊಂದು ನಂಬರಿನಿಂದ ಕರೆ ಬಂದಿದ್ದು, ಅವರ ಸ್ನೇಹಿತ ದಿಲ್ಲಿ ಏರ್ಪೋರ್ಟ್ ಅಥಾರಿಟಿಯಿಂದ ಕರೆ ಮಾಡುತ್ತಿದ್ದು, ನಿಮ್ಮ ಫ್ರೆಂಡ್ ನಮ್ಮ ಕಸ್ಟಡಿಯಲ್ಲಿದ್ದು ಇವರನ್ನು ರೆಸ್ಕ್ಯೂ/ರಿಲೀವ್ ಮಾಡಬೇಕಾದರೆ ಪೆನಾಲ್ಟಿ ಕಟ್ಟಬೇಕಾಗಿ ಹೇಳಿದ್ದು, ಭಾರತ ಸರ್ಕಾರದಿಂದ ತಮ್ಮ ಮೇಲೆ ಲೀಗಲ್ ಪ್ರೊಸೀಜರ್ ಆಗಬಹುದೆಂದು ಹೆದರಿ ಹಣವನ್ನು ಕಟ್ಟಿ ಮುಚ್ಚಲು ಹಣ ಪಾವತಿ ಮಾಡಿರುವುದಾಗಿದೆ. ವಿನಿತಾ ರವರು ಫೆಬ್ರವರಿ 16ರಿಂದ ಫೆಬ್ರವರಿ 20 ರವರೆಗೆ ಒಟ್ಟು 4,96,000/- ರೂಪಾಯಿ ಹಣವನ್ನು ಕೆನರಾ ಬ್ಯಾಂಕ್ ಖಾತೆಯ ಮೂಲಕ ಹಾಗೂ ಪೋನ್ಪೇ ಮೂಲಕ ವರ್ಗಾಯಿಸಿರುವುದಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.