ಮಂಗಳೂರು, ಫೆ 23 (DaijiworldNews/HR): ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಕ್ಯಾರಿಸ್ಮಾಟಿಕ್ ಸಂಚಲನಕ್ಕೆ 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೆಜು ಕ್ರಿಸ್ತಾಚ್ಯಾ ಮೆಟಾಂನಿ’(ಯೇಸು ಕ್ರಿಸ್ತರ ಹಾದಿಯಲ್ಲಿ) ಧ್ಯೇಯದೊಂದಿಗೆ ಸುವರ್ಣ ಮಹೋತ್ಸವದ ಮಹಾ ಬೈಬಲ್ ಸಮ್ಮೇಳನ-2025’ ಕುಲಶೇಖರದ ಕೊರ್ಡೆಲ್ ಚರ್ಚ್ ಮೈದಾನದಲ್ಲಿ ಗುರುವಾರ ಆರಂಭಗೊಂಡಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೈ|ರೇ| ಡಾ| ಪೀಟರ್ ಪಾವ್ಲ್ ಸಲ್ಡಾನಾ ಚಾಲನೆ ನೀಡಿದರು. ಬಳಿಕ ನಡೆದ ಉದ್ಘಾಟನಾ ಬಲಿಪೂಜೆಯ ನೇತೃತ್ವ ವಹಿಸಿ ಪ್ರವಚನ ನೀಡಿದ ಅವರು, ಪವಿತ್ರ ಪುಸ್ತಕ ಓದುವುದು ಹಾಗೂ ದೇವರ ವಾಕ್ಯವನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಕೊಳ್ಳಬೇಕು. ದೇವರ ವಾಕ್ಯದಂತೆ ನಡೆಯಬೇಕು. ದೇವರ ವಾಕ್ಯದ ಪ್ರೇರಣೆಯಿಂದ ಜೀವನದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ದೇವರ ವಾಕ್ಯ ಜೀವನಕ್ಕೆ ಬೆಳಕು ನೀಡುತ್ತದೆ ಎಂದು ಹೇಳಿದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ರೈ|ರೇ| ಡಾ| ಲಾರೆನ್ಸ್ ಮುಕ್ಕುಝಿ, ಕೊರ್ಡೆಲ್ ಚರ್ಚ್ನ ಧರ್ಮಗುರು ವಂ| ಕ್ಲಿಫರ್ಡ್ ಫೆರ್ನಾಂಡಿಸ್, ಬೈಬಲ್ ಕಮಿಷನ್ ನಿರ್ದೇಶಕ ವಂ| ವಿನ್ಸೆಂಟ್ ಸಿಕ್ವೆರಾ, ರಾಕ್ಣೊ ಸಂಪಾದಕ ವಂ| ರೂಪೇಶ್ ಮಾಡ್ತಾ, ಸಂಚಲನದ ಅಧ್ಯಕ್ಷ ಕೇವಿನ್ ಡಿಸೋಜಾ, ಬ್ಲೋಸಮ್ ರೇಗೊ, ವಿವಿಧ ಚರ್ಚ್ಗಳ ಧರ್ಮಗುರುಗಳು, ಧರ್ಮ ಭಗಿಣಿಯರಯ ಸಾವಿರಾರು ಸಂಖ್ಯೆಯಲ್ಲಿ ಕೆಥೋಲಿಕರು ಭಾಗವಹಿಸಿದ್ದರು.