ಉಡುಪಿ, ಫೆ 22 (DaijiworldNews/HR): ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಆಳಸಮುದ್ರ ದೋಣಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಪ್ರಕಾಶ್ ದೇವಾಡಿಗ ಅವರಿಗೆ ಸೇರಿದ ಆನಂತಕೃಷ್ಣ ಬೋಟು ರತ್ನಗಿರಿ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಬೋಟಿನ ಒಳಗೆ ನೀರು ಬರಲಾರಂಭಿಸಿತು.
ಇನ್ನು ತಕ್ಷಣ ಸಮೀಪದಲ್ಲಿದ್ದ ಮೀನಾಕ್ಷಿ ಮತ್ತು ಗಾಯತ್ರಿ ರಕ್ಷಾ ಬೋಟಿನವರು ಈ ಬೋಟಿನಲ್ಲಿದ್ದ 7 ಮಂದಿಯನ್ನು ರಕ್ಷಿಸಿದರು.
ಬೋಟನ್ನು ರಕ್ಷಣೆ ಮಾಡಲು ಸಾಧ್ಯವಾಗದೆ ಮುಳುಗಿದೆ. 6 ಲಕ್ಷ ರೂ. ಮೌಲ್ಯದ ಮೀನು, ಬಲೆ, ಡೀಸೆಲ್ ಸೇರಿದಂತೆ ಸುಮಾರು 60 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.