ಧರ್ಮಸ್ಥಳ, ಏ 27(Daijiworld News/MSP): ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗಾಂಜಾ ವ್ಯವಹಾರ ಮತ್ತು ಮೊಬೈಲ್ ಕಳ್ಳತನ ನಡೆಸುತ್ತಿದ್ದ ಯುವಕನೋರ್ವ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದ ಘಟನೆ ನಡೆದಿದೆ.
ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದ ಸುತ್ತಮುತ್ತ ಇಬ್ಬರು ಯುವಕರು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ಕಂಡು ಸ್ಥಳೀಯರು ಪ್ರಶ್ನಿಸತೊಡಗಿದ್ದಾರೆ. ಆದರೆ ಈ ಯುವಕರು ಸರಿಯಾದ ಉತ್ತರ ಕೊಡದೆ ಕಾರಣ ಅವರನ್ನು ಪರಿಶೀಲನೆ ಮಾಡಿದಾಗ ಸ್ಥಳೀಯರಿಗೆ ಅವರ ಬಳಿ ಗಾಂಜಾ ಪ್ಯಾಕೆಟ್ ,ಮೂರು ಮೊಬೈಲ್, ನಾಲ್ಕು ವಾಹನದ ಕೀ ದೊರೆತಿದೆ.
ಧರ್ಮಸ್ಥಳ ಪರಿಸರದಲ್ಲಿ ಗಾಂಜಾ ಮಾರಾಟ ನಡೆಸುತ್ತಿರುವುದರ ಹಿಂದೆ ಈ ಯುವಕರ ಕೈವಾಡವಿದೆ ಎನ್ನುವುದರ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಆದರೆ ಒಬ್ಬ ಯುವಕ ಪರಾರಿಯಾಗಿದ್ದು ಮತ್ತೋರ್ವನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನನ್ನು ತಲಪಾಡಿ ನಿವಾಸಿ ಸಮೀರ್ ಎಂದು ಗುರುತಿಸಲಾಗಿದೆ.
ಹಿಂದು ಧಾರ್ಮಿಕ ಸ್ಥಳದಲ್ಲಿ ಅನ್ಯ ಧರ್ಮಿಯನಿಗೇನು ಕೆಲಸ ಎಂದು ಪ್ರಶ್ನಿಸುತ್ತಿರುವ ಸ್ಥಳೀಯರು, ಧರ್ಮಸ್ಥಳ ಪರಿಸರದಲ್ಲಿ ಗಾಂಜಾ ಮಾರಾಟ ನಡೆಸುತ್ತಿರುವುದರ ಹಿಂದೆ ಈ ಯುವಕನ ಕೈವಾಡವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.