ಬೆಳ್ತಂಗಡಿ, ಫೆ 19 (DaijiworldNews/HR): ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 1995ರಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿದೆ.
27 ಸಪ್ಟಂಬರ್ 1995 ರಂದು ಉಜಿರೆ ಗ್ರಾಮದ ನಿವಾಸಿ ಮಂಜುನಾಥ್ ಪ್ರಭು ಅವರ ಮಗ ಗಣೇಶ್ ಪ್ರಭು ಎಂಬುವವರ ಮಾಲಿಕತ್ವಕ್ಕೆ ಸೇರಿದ ಬಾಡಿಗೆ ಮನೆಯೊಂದರಲ್ಲಿ ಪ್ರಕರಣ ಆರೋಪಿ ಶಂಕರ ಗೌಡ ಯಾನೇ ವೀರಪ್ಪ ಗೌಡ ಬಾಡಿಗೆ ನೆಲೆಯಲ್ಲಿ ವಾಸ್ತವ್ಯ ಹೊಂದಿದ್ದು, ಆರೋಪಿತನ ಪತ್ನಿ ಗಣೇಶ್ ಪ್ರಭುವಿನ ಮನೆಯಲ್ಲಿ ಮನೆಗೆಲಸ ಮಾಡುತ್ತ ಜೀವನ ನಡೆಸುತ್ತಿದ್ದರು. ನಂತರ ಆಕೆಯನ್ನು ಮನೆಕೆಲಸದಿಂದ ತೆಗೆದುಹಾಕಲಾಗಿದ್ದು ಈ ಹಿನ್ನೆಲೆಯಲ್ಲಿ ಕೆಲಸದಿಂದ ಕಿತ್ತುಹಾಕಿದ ಪೂರ್ವದ್ವೇಷದ ಕಾರಣಕ್ಕಾಗಿ ಆರೋಪಿಯು ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.
ಇನ್ನು ಈ ಸಂಬಂಧ ಶಂಕರ ಗೌಡ ಯಾನೇ ಶ್ರೀಧರ ಗೌಡ ಎಂಬವರನ್ನು ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಪ್ರಕರಣ ಕುರಿತು ದೀರ್ಘಕಾಲದ ಸಾಕ್ಷ್ಯ ವಿಚಾರಣೆಯು ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆದಿದ್ದು, ಇದೀಗ ಆರೋಪಿ ಶಂಕರಗೌಡ ಯಾನೆ ಶ್ರೀಧರ ಗೌಡ ದೋಷಮುಕ್ತನಾಗಿದ್ದಾನೆ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.