ಕಾಸರಗೋಡು,ಫೆ 17(DaijiworldNews/AK): ಅಕ್ರಮವಾಗಿ ಟ್ರಾಲಿಂಗ್ ನಡೆಸಿದ್ದ ಮೂರು ಬೋಟ್ ಗಳು ಮೇಲೆ ಮೀನುಗಾರಿಕಾ ಇಲಾಖೆ ಹಾಗೂ ತ್ರಕ್ಕರಿಪುರ, ಶಿರಿಯ, ಬೇಕಲ ಕರಾವಳಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.
ಇದೇ ವೇಳೆ ವಶಪಡಿಸಿಕೊಂಡಿರುವ ಕರ್ನಾಟಕದ ಮೂರು ಬೋಟ್ ಮಾಲಕರಿಂದ 7.5 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ.ರಾತ್ರಿ ಸಮಯದಲ್ಲಿ ಅಕ್ರಮವಾಗಿ ಈ ಬೋಟ್ ಗಳು ಟ್ರಾ ಲಿಂಗ್ ನಡೆಸಿದ್ದವು. ಕೇರಳ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾಯ್ದೆಯಂತೆ ಕ್ರಮ ತೆಗೆದು ಕೊಳ್ಳಲಾಗಿದೆ.
ಬೋಟ್ ಮಾಲಕರಾದ ಗಣೇಶ್ ಪ್ರಸನ್ನ, ಶ್ರೀರಂಗ ಹಾಗೂ ಏಷ್ಯನ್ ಬ್ಲೂ ಬೋಟ್ ಗಳನ್ನು ಕುಂಬಳೆ ತೀರದಿಂದ 12 ನಾಟಿ ಕಲ್ ಮೈ ಲ್ ದೂರದಿಂದ ಬೋಟ್ ಗಳ ನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ರೀತಿ ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಮುಂದುವರಿಸಲಾಗಿವುದು ಎಂದು ಮೀನುಗಾರಿಕಾ ಇಲಾಖಾ ನಿರ್ದೇಶಕ ಕೆ. ಎ. ಲಬೀಬ್ ತಿಳಿಸಿದ್ದಾರೆ