ಕುಂದಾಪುರ,ಫೆ 17(DaijiworldNews/AK): ಕೋಡಿ ಕಡಲ ತೀರದಲ್ಲಿ ವಿದ್ಯಾರ್ಥಿಯೆಂದು ಶಂಕಿಸಲಾದ ವ್ಯಕ್ತಿಯೊಬ್ಬನ ಮೃತ ದೇಹ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.
ಶನಿವಾರ ಬೆಳಿಗ್ಗೆ ಸ್ಥಳೀಯರು ಸಮುದ್ರ ತೀರಕ್ಕೆ ಬಂದಾಗ ಶವ ಪತ್ತೆಯಾಗಿದ್ದು, ಪ್ಯಾಂಟ್, ಬೆಲ್ಟ್ ಚಪ್ಪಲ್, ಆಧಾರ್ ಕಾರ್ಡ್, ಕಾಲೇಜು ಐಡೆಂಟಿಟಿ ಕಾರ್ಡ್, ಬಸ್ ಟಿಕೆಟ್ ಮೊದಲಾದ ದಾಖಲೆಗಳು ದೊರಕಿವೆ.
ಪ್ಯಾಂಟ್ ಜೇಬಿನಲ್ಲಿ ದಾಖಲೆಗಳು ದೊರಕಿವೆ. ಶರ್ಟ್ ಪತ್ತೆಯಾಗಿಲ್ಲ. ಹೊಟ್ಟೆಯಲ್ಲಿ ನೀರು ತುಂಬಿರದ ಕಾರಣ ನೀರಿಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆಗಳು ಇಲ್ಲ ಎನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನ 1.42ಕ್ಕೆ ಮಳವಳ್ಳಿಯಿಂದ ಮೈಸೂರಿಗೆ ಸರ್ಕಾರೀ ಬಸ್ಸಿನಲ್ಲಿ ಪ್ರಯಾಣಿಸಿದ ಟಿಕೆಟ್ ಪತ್ತೆಯಾಗಿದೆ. ಸ್ಥಳದಲ್ಲಿ ದೊರಕಿದ ದಾಖಲೆಗಳು ಮೃತ ವ್ಯಕ್ತಿಯದ್ದೇ ಅಲ್ಲವೇ? ಎಂಬುದನ್ನು ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.