ಉಳ್ಳಾಲ, ಫೆ 17(DaijiworldNews/AK):ಶಿಕ್ಷಣ ಕೊಟ್ಟ ಸಂಸ್ಥೆಯನ್ನು ಜೀವನದುದ್ದಕ್ಕೂ ಸ್ಮರಿಸುತ್ತಾ ಪ್ರತಿಯೊಬ್ಬರು ಬಾಳುತ್ತೇವೆ. ಸಂಸ್ಥೆಯ ರಾಯಭಾರಿ ಆಗಿದ್ದುಕೊಂಡು ಸಂಸ್ಥೆಯ ಧ್ವಜವನ್ನು ಎತ್ತಿ ಹಿಡಿದು ಯಶಸ್ಸಿನ ಮೈಲಿಗಲ್ಲು ಏರುವವರಾಗಿ ಎಂದು ಬೆಂಗಳೂರು ನಿಮ್ಹಾನ್ಸ್ ಕಾಲೇಜು ಪ್ರಾಂಶುಪಾಲೆ ಡಾ. ಬಿ.ವಿ ಕಾತ್ಯಾಯಿನಿ ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪಾನೀರು ಗ್ರೌಂಡಿನಲ್ಲಿ ಆಯೋಜಿಸಲಾದ ನಿಟ್ಟೆ ಉಷಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಇದರ ವಾರ್ಷಿಕೋತ್ಸವ ' ತರಂಗ್ 2024 ' ಚಾಲನೆ ನೀಡಿ ಮಾತನಾಡಿ, ಒಂದು ದಿನದ ಕೆಲಸವಲ್ಲ, ನುಯಿನ್ಸ್ ತಂಡದ ಶ್ರಮದಿಂದ ವಾರ್ಷಿಕ ಸಮಾರಂಭ ಅದ್ಧೂರಿಯನ್ನು ಪಡೆದುಕೊಂಡಿದೆ.
ಪರೋಪಕಾರ ಇಧಂ ಶರೀರಂ ನಾಣ್ಣುಡಿ ನರ್ಸಿಂಗ್ ಕಾರ್ಯಕ್ಕೆ ಪೂರಕವಾಗಿದೆ. ದಾದಿಯರ ಸೇವೆ ಸ್ವಾರ್ಥಕ್ಕಾಗಿ ಮಾತ್ರವಲ್ಲ ಸಮಾಜಕ್ಕಾಗಿ ನಡೆಸುತ್ತಿರುವ ಸೇವೆಯಾಗಿದೆ. ನಿಟ್ಟೆ ಸಂಸ್ಥೆಗೆ ಭಾರತ ದೇಶದಲ್ಲೇ ಉತ್ತಮ ರ್ಯಾಂಕಿಂಗ್ ಇದೆ. ಶ್ರಮವಹಿಸಿ ನಡೆಸುವ ಕಾರ್ಯದಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ. . ಕೋವಿಡ್ ಸಂದರ್ಭ ದಾದಿಯರ ಸೇವೆಯತ್ತ ಇಡೀ ವಿಶ್ವವೇ ನೋಡುವಂತಾಯಿತು ಎಂದರು.
ಹೆತ್ತವರು, ಸಂಸ್ಥೆ, ದೇಶ, ಸೈನಿಕರು, ರೈತರಿಗಾಗಿ ನಿತ್ಯ ಪ್ರಾರ್ಥಿಸುವ ಮುಖೇನ ಋಣ ತೋರಿಸುವವರಾಗಿರಿ. ತಡರಾತ್ರಿಯಲ್ಲೂ ಚಿಕಿತ್ಸೆಗೆ ಸಿಗುವ ದಾದಿಯರೆಂದರೆ ದೇವತೆ ಅಂದವರು ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ದಾದಿಯರ ಸೇವೆಯನ್ನು ಕೊಂಡಾಡಿದವರು. ಪ್ರತಿಷ್ಠಿತ ಅಮೆರಿಕಾದ ಗ್ಯಾಲಬ್ ಸರ್ವೆಯಡಿ ಉತ್ತಮ ಸೇವೆಯಾಗಿ ನರ್ಸಿಂಗ್ ವೃತ್ತಿಗೆ ಮೊದಲ ಸ್ಥಾನ ನೀಡಿತ್ತು. ಮುಂದೆಯೂ ವೃತ್ತಿಗೆ ನ್ಯಾಯ ಒದಗಿಸುವ ಕಾರ್ಯ ಭವಿಷ್ಯದ ದಾದಿಯರಿಂದ ಆಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರ್ಷ ಹಾಲಹಳ್ಳಿ ಮಾತನಾಡಿ, ಕಾಲೇಜಿನ ಅಭಿವೃದ್ಧಿ ಗೆ ಶ್ರಮವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಮುಂದೆಯೂ ಎಲ್ಲರ ಶ್ರಮ ಮುಂದುವರಿಯಲಿ. ಏಷ್ಯಾ ರ್ಯಾಂಕಿಂಗ್, ದೇಶದೊಳಗಿನ ರ್ಯಾಂಕಿಂಗ್ ನಿಟ್ಟೆ ಸಂಸ್ಥೆ ಪಡೆದುಕೊಂಡಿದೆ. ಆರ್ಟಿಫಿಷಲ್ ಇಂಟೆಲಿಜೆನ್ಸ್ ಎಲ್ಲಾ ಕಾರ್ಯಗಳನ್ನು ತಾನಾಗಿಯೇ ನಡೆಸಲು ಸಾಧ್ಯ. ಇದರಿಂದ ಪ್ರತಿ ವೃತ್ತಿಯಲ್ಲೂ ಆತಂಕವಿದೆ. ಆದರೆ ದಾದಿಯರ ಸೇವೆಯನ್ನು ರೊಬೊಟಿಕ್ ನಡೆಸಲು ಅಸಾಧ್ಯ ಎಂದರು.
ಈ ಸಂದರ್ಭ ಪ್ರೊ.ಫಿಲೋಮಿನಾ ಫೆರ್ನಾಂಡಿಸ್ , ಪರಿಚಾರಕಿ ಆಗಿ ಸೇವೆ ಸಲ್ಲಿಸಿದ ವಾರಿಜಾ ಅವರನ್ನು ಸನ್ಮಾನಿಸಲಾಯಿತು. ವಾರ್ಪಿಕೋತ್ಸವ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ಹಾಗೂ ಉತ್ತಮ ಹೊರಹೋಗುವ ವಿದ್ಯಾರ್ಥಿ ಗೆ ಬಹುಮಾನ ವಿತರಿಸಲಾಯಿತು.
ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲೆ ಕ್ಲೀಟಾ ಆಲೆನ್ ಪಿಂಟೋ ಸ್ವಾಗತಿಸಿದರು.
ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಪ್ರೊ.ಫಾತಿಮ ಡಿಸಿಲ್ವ ವಾರ್ಷಿಕ ವರದಿ ವಾಚಿಸಿದರು.ಡಾ. ನಳಿನಿ , ಕೀರ್ತಿಮಾಲಾ ಸನ್ಮಾನಿತರ ವಿವರ ಓದಿದರು.ಸುಚಿತ್ರ ಬಹುಮಾನಿತರ ವಿವರ ಓದಿದರು.ಉಪನ್ಯಾಸಕಿ ಬಿಂದು ನಿರೂಪಿಸಿದರು.ಉಪಪ್ರಾಂಶುಪಾಲು ಡಾ.ಸಬಿತಾ ನಾಯಕ್ ವಂದಿಸಿದರು.