ಪತ್ರಿಕಾ ಪ್ರಕಟನೆ:
ಮಂಗಳೂರು, ಫೆ 17: ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಂಗಳೂರು ಕ್ವಾಲಿಟಿ ಮತ್ತು ಅಕ್ರಿಡಿಟೇಶನ್
ಇನ್ಸ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಅಡ್ವಾನ್ಸ್ಡ್ ಸ್ಟ್ರೋಕ್ ಸೆಂಟರ್ ಎಂದು ಮಾನ್ಯತೆ ಪಡೆದಿದ್ದು, ಉತ್ತಮ ಗುಣಮಟ್ಟದ ಪಾರ್ಶ್ವವಾಯು ಆರೈಕೆಯನ್ನು ಒದಗಿಸುವ ಮತ್ತು ನರವಿಜ್ಞಾನ ಕ್ಷೇಮವನ್ನು ಮುನ್ನಡೆಸುವ ಸಂಸ್ಥೆಯ ಬದ್ಧತೆಯ ಮಹತ್ವದ ಮೈಲಿಗಲ್ಲಾಗಿದೆ. ಮಂಗಳೂರಿನ ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ದೇಶದಲ್ಲಿ 12ನೇ ಮತ್ತು ಕರ್ನಾಟಕದಲ್ಲಿ ೩ನೇ ಹಾಗೂ ಈ ಪ್ರದೇಶದ ಏಕೈಕ ಮಾನ್ಯತೆ ಪಡೆದಿರುವ ಸಂಸ್ಥೆ ಆಗಿದೆ.
ಈ ಮಾನ್ಯತೆಯು ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಂಗಳೂರು ಆಸ್ಪತ್ರೆಯು ಪಾರ್ಶ್ವವಾಯು ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ಚಿಕಿತ್ಸೆಗೆ ಸಮಗ್ರ ಮತ್ತು ಬಹುಶಿಸ್ತೀಯ ವಿಧಾನವನ್ನು ಒಳಗೊಂಡ ಪಾರ್ಶ್ವವಾಯು ಆರೈಕೆಯ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಗುಣಮಟ್ಟ ಮತ್ತು ಮಾನ್ಯತಾ ಸಂಸ್ಥೆಯು ಈ ಪ್ರತಿಷ್ಠಿತ ಮಾನ್ಯತೆಯನ್ನು ನೀಡುವ ಮೊದಲು ನಮ್ಮ ಆಸ್ಪತ್ರೆಯ ಸಾಮರ್ಥ್ಯ, ಮೂಲಸೌಕರ್ಯ ಮತ್ತು ನಮ್ಮ ವೈದ್ಯಕೀಂಯ ವೃತ್ತಿಪರರ ಪರಿಣತಿಯನ್ನು ಸಂಪೂರ್ಣವಾಗಿ ಮೌಲ್ಯಮಾಪನ ಮಾಡಿಕೊಂಡಿದೆ.
"ಭಾರತೀಯ ಗುಣಮಟ್ಟ ಮತ್ತು ಮಾನ್ಯತಾ ಸಂಸ್ಥೆಯಿಂದ ಅಡ್ವಾನ್ಸ್ ಸ್ಟ್ರೋಕ್ ಸೆಂಟರ್ ಎಂಬ ಮಾನ್ಯತೆಯನ್ನು ಸ್ವೀಕರಿಸಲು ನಮಗೆ ಹೆಮ್ಮೆಯೆನಿಸುತ್ತಿದೆ" ಮತ್ತು "ಈ ಮಾನ್ಯತೆಯೂ ಅಸಾಧಾರಣವಾದ ಪಾರ್ಶ್ವವಾಯು ಆರೈಕೆಯನ್ನು ನೀಡಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ರೋಗಿಗಳ ಸುರಕ್ಷತೆ ಮತ್ತು ಫಲಿತಾಂಶಗಳ ಅತ್ಯುನ್ನತ ಗುಣಮಟ್ಟವನ್ನು ನಿರ್ವಹಿಸುವುದರತ್ತ ನಮ್ಮ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ವೈದ್ಯಕೀಯ ನಿರ್ದೇಶಕರಾದ ಡಾ. ರಾಜೇಶ್ ಶೆಟ್ಟಿ ಹೇಳಿದರು.
ಅತ್ಯಾಧುನಿಕ ಸ್ಟ್ರೋಕ್ ಸೆಂಟರ್ ಆಗಿ ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಅತ್ಯಾಧುನಿಕ ರೋಗನಿರ್ಣಯ ಸಾಧನಗಳು, ನವೀನ ಚಿಕಿತ್ಸೆಗಳು ಮತ್ತು ಪುನಶ್ಚೇತನ ಕಾರ್ಯಕ್ರಮಗಳು ಸೇರಿದಂತೆ ಪಾರ್ಶ್ವವಾಯು ಚಿಕಿತ್ಸೆಯಲ್ಲಿ ಇತ್ತೀಚಿನ ಪ್ರಗತಿಗಳನ್ನು ಕಾರ್ಯಗತಗೊಳಿಸಲು ಗಮನಹರಿಸುವುದನ್ನು ಮುಂದುವರಿಸುತ್ತದೆ. ನಮ್ಮಲ್ಲಿರು ಹೆಚ್ಚು ನುರಿತ ನರವಿಜ್ಞಾನಿಗಳು, ನರಶಸ್ತ್ರಚಿಕಿತ್ಸಕರು, ಇಂಟರ್ವೆನ್ಷನಲ್ ನ್ಯೂರೋ ರೇಡಿಯೋಲಾಜಿಸ್ಟ್ಗಳು, ಕ್ರಿಟಿಕಲ್ ಕೇರ್ ತಜ್ಞರು ಮತ್ತು ಸಹಾಯಕ ಸಿಬ್ಬಂದಿಯ ತಂಡವು ಪಾರ್ಶ್ವವಾಯು ರೋಗಿಗಳಿಗೆ ಸಮಯೋಚಿತ ಮತ್ತು ಪರಿಣಾಮಕಾರಿ ಆರೈಕೆಯನ್ನು ಒದಗಿಸಲು ಸಮರ್ಪಿತವಾಗಿದೆ, ಹಾಗೂ ಉತ್ತಮ ಫಲಿತಾಂಶಗಳನ್ನು ಖಾತ್ರಿಪಡಿಸುತ್ತದೆ.
ಸ್ಟ್ರೋಕ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಪಡೆದ ಮಾನ್ಯತೆಯೂ ಕೇವಲ ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ಟ್ರೋಕ್ ಆರೈಕೆಯಲ್ಲಿ ಪರಿಣತಿಯನ್ನು ಗುರುತಿಸುವುದು ಮಾತ್ರವಲ್ಲದೆ ಅದು ನಮ್ಮ ಸಮಾಜಕ್ಕೆ ವಿಶ್ವಾಸಾರ್ಹ ಆರೋಗ್ಯ ಸೇವೆಯ ಪೂರೈಕೆದಾರರಾಗಿ ಒಂದು ಹೊಸ ಭರವಸೆಯನ್ನು ನೀಡುತ್ತದೆ. ರೋಗಿಗಳು ಫಸ್ಟ್ ನ್ಯೂರೋ ಬ್ರೇನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಸ್ಟ್ರೋಕ್ ಆರೈಕೆಯನ್ನು ಪಡೆಯುತ್ತಾರೆ ಎಂಬ ವಿಶ್ವಾಸ ಹೊಂದಬಹುದು ಎಂದು ಹೇಳಿದ್ದಾರೆ.
ಫಸ್ಟ್ ನ್ಯೂರೋ ಬ್ರೇನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸುಧಾರಿತ ಸ್ಟ್ರೋಕ್ ಸೆಂಟರ್ ಮಾನ್ಯತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಥವಾ ನಮ್ಮ ತಜ್ಞರೊಂದಿಗೆ ಸಂದರ್ಶನಗಳನ್ನು ನಿಗದಿಪಡಿಸಲು, ದಯವಿಟ್ಟು ಸಂಪರ್ಕಿಸಿ:0824-2276633,9343442488