ಮಂಗಳೂರು, ಫೆ 15 (DaijiworldNews/HR): ಕಳೆದ 21 ವರ್ಷಗಳ ಹಿಂದೆ 9 ಮಸೀದಿಯನ್ನೊಳಗೊಂಡು ಆರಂಭಿಸಿದರ ಗುರುಪುರ ರೇಂಜ್ ಇದೀಗಾ 36 ಮಸೀದಿಯನ್ನೊಳಗೊಂಡ ದೊಡ್ದ ರೇಂಜ್ ಆಗಿ ಬೆಳೆದಿದೆ. ಇದೀಗಾ ರೇಂಜ್ ನಿಯಮಾವಳಿಯಂತೆ ಗುರುಪುರ ರೇಂಜ್ ಮೂರು ರೇಂಜ್ ಗಳಾಗಿ ಮಳಲಿ ರೇಂಜ್, ಸುರಲ್ಪಾಡಿ ರೇಂಜ್, ಗುರುಪುರ ರೇಂಜ್ ಆಗಿ ವಿಂಗಡಿಸಲಾಗಿದೆ.
ಗುರುಪುರ ರೇಂಜ್ ಸಮಿತಿಯ ಸಭೆಯು ಫೆ.15ರಂದು ಗುರುಪುರ ದಾರು ಸಲಾಂ ಮಸೀದಿಯಲ್ಲಿ ನಡೆದಿದ್ದು, ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ.
ನೂತನ ಗುರುಪುರ ರೇಂಜ್ ಅಧ್ಯಕ್ಷರಾಗಿ ಇಸ್ಮಾಯಿಲ್ ಉಳಾಯಿಬೆಟ್ಟು, ಉಪಾಧ್ಯಕ್ಷ ಮಹಮ್ಮದ್ ಆಸಿಫ್ ತಾರಿಗುಡ್ಡೆ, ಕಾರ್ಯದರ್ಶಿ ಮುಸ್ತಫ ಸೈಟ್, ಕೋಶಾಧಿಕಾರಿ ಸಾಹುಲ್ ಹಮೀದ್ ಮೆಟ್ರೋ, ಜೊತೆ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ ಅಹಮ್ಮದ್ ಬಾವ, ವರ್ಕಿಂಗ್ ಕಾರ್ಯದರ್ಶಿ ಮುಸ್ತಫಾ ಬಂಗ್ಳಗುಡ್ಡೆ, ಜಿಲ್ಲಾ ಸಮಿತಿ ಸದಸ್ಯರಾಗಿ ಅಬ್ದುಲ್ ಆಝೀಝ್ ಬಾಷ, ಅಬ್ದುಲ್ ರಹಿಮಾನ್ ಅವರನ್ನು ಆಯ್ಕೆ ಮಾಡಲಾಯಿತು... ಈ ವೇಳೆ ಮೂರು ರೇಂಜ್ ಗಳಿಗೆ ಹಿರಿಯ ಸಲಹೆಗಾರರಾಗಿ ಅಬೂಬಕ್ಕರ್ ಮಳಲಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮಳಲಿ ರೇಂಜ್ ಕಾರ್ಯದರ್ಶಿ ಇಬ್ರಾಹಿಂ ಕುಕ್ಕಟ್ಟೆ, ಜಿಲ್ಲಾ ಸಮಿತಿ ಸದಸ್ಯರಾದ ಆರೀಫ್ ಕಮ್ಮಾಜೆ, ಮಳಲಿ ಕೋಶಾಧಿಕಾರಿ ಅಬ್ಬಾಸ್ ನಾಡಾಜೆ ಮತ್ತಿತರರು ಉಪಸ್ಥಿತರಿದ್ದರು.