ಮಂಗಳೂರು, ಫೆ 15 (DaijiworldNews/MS): ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನಗಳ ಬ್ಯಾಟರಿ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಟ್ರ ಕ್ಗಳ ಬ್ಯಾಟರಿ ಕಳ್ಳತನವಾಗಿರುವ ಬಗ್ಗೆ ಜನವರಿ 29ರಂದು ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಯಾದ ತಲಪಾಡಿ ಕಜೆ ಸಮೀಪದ ಕೆಳಗಿನ ಮನೆ ನಿವಾಸಿ ರಿಯಾಜ್ ತಲಪಾಡಿ ಎಂಬಾತನನ್ನು ಫೆ.14ರಂದು ನಾಟೆಕಲ್ನಿಂದ ಬಂಧಿಸಿ ಆರೋಪಿ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಹಾಗೂ ಕದ್ದ ಬ್ಯಾಟರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇತನಿಂದ ವಶಪಡಿಸಿಕೊಂಡ ಒಟ್ಟಾರೆ ಸೊತ್ತುಗಳ ಮೌಲ್ಯ ರೂ. 3.9 ಲಕ್ಷ ಎಂದು ಅಂದಾಜಿಸಲಾಗಿದೆ.
ಪತ್ತೆಕಾರ್ಯದಲ್ಲಿ ಅನುಪಮ್ ಅಗರವಾಲ್, ಐ.ಪಿ.ಎಸ್ರವರ ಮಾರ್ಗದರ್ಶನದಂತೆ ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ದಿನೇಶ್ಕುಮಾರ್ ನಿರ್ದೇಶನದಂತೆ, ಮಂಗಳೂರು ದಕ್ಷಿಣ ವಿಭಾಗದ ಎ.ಸಿ.ಪಿ. ಶ್ರೀಮತಿ ಧನ್ಯ ಎನ್ ನಾಯಕ ರವರ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರವೀದ್ರ ಸಿ ಎಂ, ಪೊಲೀಸ್ ಉಪ ನಿರೀಕ್ಷಕರುಗಳಾದ ನಾಗರಾಜ್ ಎಸ್, ಪುನೀತ್ ಗಾಂವಕಾರ್, ಅಶೋಕ್, ಯಲ್ಲಾಲಿಂಗ, ಸಿಬ್ಬಂದಿಗಳಾದ ಸಂಜೀವ್ ಎಎಸ್ಐ ,ರೇಶ್ಯಾ, ಸಂತೋಷ್ ಕೆ ಸಿ, ಬಸವನಗೌಡ, ಸುರೇಶ್ ತಳವಾರ್ ಭಾಗವಹಿಸಿದ್ದರು