ಮಂಗಳೂರು, ಫೆ 14 (DaijiworldNews/AA): ವಕೀಲರಾದ ರಾಮ್ ಪ್ರಸಾದ್ ಹಾಗೂ ಕಾರ್ತಿಕ್ ಆರ್ ಉಡುಪ ಅವರ ಮಂಗಳೂರು ಕರಂಗಲ್ಪಾಡಿ ಮೆಜೆಸ್ಟಿಕ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ಆರಂಭವಾದ ಕಚೇರಿಯ ಉದ್ಘಾಟನಾ ಸಮಾರಂಭವು ಫೆಬ್ರವರಿ 11 ರಂದು ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕರಾದ ಲಕ್ಷ್ಮಿ ನಾರಾಯಣ ಅಸ್ರಣ್ಣ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಆಶೀರ್ವಾದ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಪೃಥ್ವಿರಾಜ್ ರೈ, ಎಸ್ ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ತಾರಾನಾಥ್, ಹಿರಿಯ ವಕೀಲರಾದ ಪಿ ರಂಜನ್ ರಾವ್, ಉಪ್ಪಿನಂಗಡಿಯ ಉದ್ಯಮಿ ರಾಮಣ್ಣ ಭಾಗವಹಿಸಿ, ಶುಭ ಕೋರಿದರು.
ಈ ಸಂದರ್ಭ ವಕೀಲರಾದ ರಾಮ್ ಪ್ರಸಾದ್ ಅವರು ಸ್ವಾಗತಿಸಿ, ಪ್ರಸ್ತಾವನೆ ಗೈದರು. ನ್ಯಾಯವಾದಿ ಕಾರ್ತಿಕ್ ಆರ್ ಉಡುಪ ವಂದಿಸಿ, ತುಳುವ ಬೊಳ್ಳಿ ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮವನ್ನು ನಿರೂಪಿಸಿದರು.