ಮಂಗಳೂರು ನ 17: ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರಮಟ್ಟ ಹೆಚ್ಚಾದಲ್ಲಿ ಮುಳುಗಡೆಯ ಅಪಾಯ ಕರಾವಳಿ ನಗರ ಮಂಗಳೂರಿಗೆ ಹೆಚ್ಚು’ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ– ನಾಸಾ ಹೇಳಿದೆ.
ಭಾರತದ ಲೆಕ್ಕಚಾರದಲ್ಲಿ ಸ್ಥಳೀಯವಾಗಿ ಸಮುದ್ರ ಮಟ್ಟ ಹೆಚ್ಚಿರೋದು ಮಂಗಳೂರಿನಲ್ಲಿಯೇ. ಇಲ್ಲಿನ ಸಮುದ್ರ ಮಟ್ಟ 1.598 ಎಂ ಎಂ ಇದೆ ಇನ್ನು ಮುಂಬಯಿ ಸಮುದ್ರ ಮಟ್ಟ 1.526 ಎಂ ಎಂ ಇದೆ ಹೀಗಾಗಿ ಮಂಗಳೂರಿಗೆ ಅಪಾಯ ಹೆಚ್ಚು ಎನ್ನುವುದು ತಜ್ಞರ ವಾದ. ಅಂಟಾರ್ಟಿಕಾದ ಪಶ್ಚಿಮ ಭಾಗದ ಹಿಮ ಮತ್ತು ಗ್ರೀನ್ಲ್ಯಾಂಡ್ನ ದಕ್ಷಿಣ ಭಾಗದಲ್ಲಿನ ಹಿಮ ಕರಗಿದರೆ ಮಂಗಳೂರು ಇನ್ನಷ್ಟು ಅಪಾಯ ಎದುರಿಸಲಿದೆ.
ಜಾಗತಿಕ ತಾಪಮಾನ ಏರಿಕೆಯಿಂದ ಯಾವ ಹಿಮನದಿ, ಹಿಮಗಲ್ಲುಗಳು ಕರಗಿದರೆ ಯಾವ ನಗರಗಳ ಭಾಗಗಳು ಮುಳುಗುತ್ತವೆ ಎಂಬುದನ್ನು ಲೆಕ್ಕ ಹಾಕುವ ಆನ್ಲೈನ್ ಸಿಮ್ಯುಲೇಟರ್ ಅನ್ನು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಅಭಿವೃದ್ಧಿಪಡಿಸಿದೆ. ಈ ಸಿಮ್ಯುಲೇಟರ್ ಅನ್ನು ಬಳಸಿಕೊಂಡು ವಿಶ್ವದ ಯಾವ ನಗರಗಳು ಎಷ್ಟು ಅಪಾಯ ಎದುರಿಸುತ್ತವೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ.
‘ಈ ಸಿಮ್ಯುಲೇಟರ್ ನೀಡುವ ಫಲಿತಾಂಶಗಳನ್ನು ಆಧರಿಸಿ ನಗರ ಯೋಜಕರು ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಈ ನಗರಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸುವಾಗ ಕನಿಷ್ಠ 100 ವರ್ಷದ ಮುಂದಾಲೋಚನೆ ಇರಬೇಕು’ ಎಂದು ನಾಸಾ ಹೇಳಿದೆ.