ಉಳ್ಳಾಲ, ಫೆ 09 (DaijiworldNews/HR): 10 ಗಂಟೆಗಳ ಸುದೀರ್ಘವಾದ ಶಸ್ತ್ರಚಿಕಿತ್ಸೆಯ ಮೂಲಕ ಶ್ವಾಸಕೋಶದಲ್ಲಿ 40ಕ್ಕೂ ಹೆಚ್ಚು ಕ್ಯಾನ್ಸರ್ ನಿಕ್ಷೇಪಗಳನ್ನು ಯಶಸ್ವಿಯಾಗಿ ದೇರಳಕಟ್ಟೆ ಯೆನೆಪೋಯ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದು, ಯೆನೆಪೊಯ ವೈದ್ಯಕೀಯ ಕಾಲೇಜಿನ ಜುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕಲಾಜಿ ನಡೆಸಿರುವ ಸಾಧನೆ ದೇಶದಲ್ಲೆ ಮೊದಲು ಎಂದು ವೈದ್ಯರ ತಂಡ ತಿಳಿಸಿದೆ.
ದೇರಳಕಟ್ಟೆ ಯೆನೆಪೋಯ ಸಂಸ್ಥೆಯಲ್ಲಿ ಇಂದು ವೈದ್ಯರ ತಂಡ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಶಸ್ತ್ರಚಿಕಿತ್ಸೆಯ ೯ ದಿನಗಳಲ್ಲೇ ಮಗು ಚೇತರಿಕೆಯನ್ನು ಪಡೆದುಕೊಂಡಿದೆ. 9 ನೇ ತಿಂಗಳಿನ ಹೆಣ್ಣುಮಗುವಿನ ದೇಹದ 4 ವಿವಿಧ ಭಾಗ ಗಳಾದ ಕಣ್ಣು, ತೊಡೆಯ ಮೂಳೆ, ಕರುಳು ಮತ್ತು ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು. ತನ್ನ 9 ನೇ ತಿಂಗಳಿನಲ್ಲಿ ಮದುರೈ ಅರವಿಂದ್ ಆಸ್ಪತ್ರೆ ಮತ್ತು ಹೈದರಾಬಾದ್ ದೃಷ್ಟಿ ಕೇಂದ್ರದಲ್ಲಿ ಕಣ್ಣಿನ ಅರ್ಬುದ ರೋಗಗಕ್ಕೆ ಚಿಕಿತ್ಸೆ ಪಡೆದಿದ್ದಳು. 2021 ರಲ್ಲಿ ತೊಡೆ ಮೂಳೆಯ ಅರ್ಬುದ ರೋಗಗಕ್ಕೆ ಕೊಚ್ಚಿಯ ಲೇಕ್ ಶೋರ್ ಆಸ್ಪತ್ರೆ ಮತ್ತು ಎಸ್ವಿಟಿ ಆಸ್ಪತ್ರೆ ತಿರುವನಂತಪುರದಲ್ಲಿ ಚಿಕಿತ್ಸೆ ಪಡೆದಿದ್ದರು. 2022 ರಲ್ಲಿ ಕೊಚ್ಚಿಯಲ್ಲಿ ಶ್ವಾಸಕೋಶದ ದ್ವಿತೀಯಕಗಳಿಗೆ (ಶ್ವಾಸಕೋಶಕ್ಕೆ ಹರಡುವಿಕೆಗೆ) ಚಿಕಿತ್ಸೆ ಹಾಗು 2023 ರಲ್ಲಿ ತಿರುವನಂತಪುರದ ಸರ್ಕಾರಿ ಕಾಲೇಜಿನಲ್ಲಿ ಕರುಳಿನ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದು, ನಂತರ ಮಿತ್ರ ಆಸ್ಪತ್ರೆ ಕ್ಯಾಲಿಕಟ್ನಲ್ಲಿ ಚಿಕಿತ್ಸೆ ಮುಂದುವರಿಸಿದರು. ಈ ಸಮಯದಲ್ಲಿ ಶ್ವಾಸಕೋಶದ ದ್ವಿತೀಯಕಗಳ ಕ್ಯಾನ್ಸರ್ ಮತ್ತೆ ಉಲ್ಬಣಗೊಂಡಿದ್ದು, ಕಂಡುಬಂದು ಇದಕ್ಕೆ ಹೆಚ್ಚಿನ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಾಗಿ ಸೂಚಿಸಲಾಗಿತ್ತು. ಪ್ರಸಕ್ತ ರೋಗಾಸ್ಥಿತಿಯು ಭಾರತದಾದ್ಯಂತ 250 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಒಳಗೊಂಡಿರುವ ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್ನಲ್ಲಿ ಮುಂದಿನ ನಿರ್ವಹಣೆಯ ಕುರಿತು ಚರ್ಚಿಸಲಾಯಿತು ಹಾಗು ಶಾಸ್ತ್ರಚಿಕಿತ್ಸೆಯ ಅಗತ್ಯತೆಯನ್ನು ನಿರ್ಧರಿಸಲಾಯಿತು ಎಂದರು.
ಇನ್ನು ಸೂಚಿಸಿದಂತಹ ಶಸ್ತ್ರಚಿಕಿತ್ಸೆ ಅತ್ಯಂತ ಸಂಕೀರ್ಣ ಮತ್ತು ಕ್ಲಷ್ಟಕರವಾಗಿರುವುದರಿಂದ ರೋಗಿಯ ಪರಿವಾರವನ್ನು ಟಾಟಾ ಮೆಮೋರಿಯಲ್ ಆಸ್ಪತ್ರೆ ಅಥವಾ ಮಂಗಳೂರಿನ ಯೆನೆಪೊಯ ವೈದ್ಯಕೀಯ ಕಾಲೇಜಿನ ಡಾ. ಜಲಾಲುದ್ದೀನ್ ಅಕ್ಬರ್ ಅವರನ್ನು ಸಂಪರ್ಕಿಸಲು ಮಾರ್ಗದರ್ಶಿಸಲಾಗಿತ್ತು. ರೋಗಿಯ ಸಂಬಂಧಿಕರು ಮಂಗಳೂರಿನ ಡಾ.ಜಲಾಲುದ್ದೀನ್ ಅಕ್ಬರ್ ಅವರ ಬಳಿ ಚಿಕಿತ್ಸೆ ಪಡೆಯಲು ಆದ್ಯತೆ ನೀಡಿರುವುದರಿಂದ, ಪ್ರಕರಣವನ್ನು ಜುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಟ್ಯೂಮರ್ ಬೋರ್ಡ್ನಲ್ಲಿ ಚರ್ಚಿಸಲಾಯಿತು. ಹಾಗು ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಕರ್ಯಗಳ ಲಭ್ಯತೆಯಿರುವುದರಿಂದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಇಲ್ಲಿ ನಡೆಸಲು ನಿರ್ಧರಿಸಲಾಯಿತು.. ಅದರಂತೆ ೧೦ ಗಂಟೆಗಳ ದೀರ್ಘ ಶಾಸ್ತ್ರಚಿಕಿತ್ಸೆಯಿಂದ ಶ್ವಾಸಕೋಶ ಹಾಗು ಎರಡು ಪಕ್ಕೆಲುಬುಗಳಿಂದ ಎಲ್ಲಾ ಗೆಡ್ಡೆಗಳನ್ನು, ತೆಗೆದು ಭಾರತದೆಲ್ಲೆ ಶಾಸ್ತ್ರಚಿಕಿತ್ಸೆಯ ಮೂಲಕ ಅತೀ ಹೆಚ್ಚು ಗೆಡ್ಡೆಗಳು. ಗೆಡ್ಡೆಗಳ್ಳನ್ನು ತೆಗೆಯ ಕೀರ್ತಿಗೆ ತಂಡ ಭಾಜನವಾಗಿದೆ.
ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆಯ ಮಾರ್ಗದರ್ಶನವನ್ನು ಯೆನೆಪೋಯ ಪರಿಗಣಿತ ವಿ.ವಿ.ಯ ಕುಲಪತಿ ಡಾ.ವಿಜಯಕುಮಾರ್ ಎಂ ಮಾರ್ಗದರ್ಶನದಲ್ಲಿ ಡಾ.ಜಲಾಲುದ್ದೀನ್ ಅಕ್ಬರ್ ನೇತ್ರತ್ವದಲ್ಲಿ, ಡಾ.ರೋಹನ್ ಶೆಟ್ಟಿ, ಡಾ.ಎಚ್.ಟಿ.ಅಮರ್ ರಾವ್, ಡಾ.ನೂರ್ ಮೊಹಮ್ಮದ್ ಅವರನ್ನೊಳಗೊಂಡ ಶಸ್ತ್ರಚಿಕಿತ್ಸಾ ತಂಡ, ಹಾಗು ಅರಿವಳಿಕೆ ತಜ್ಞರಾದ ಡಾ. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಡಾ.ಸಂದೇಶ್( ಪೀಡಿಯಾಟ್ರಿಕ್ ವಿಭಾಗ) ಡಾ. ಡಾ.ಆದರ್ಶ್ (ಪಲ್ಮನಾಲಜಿ ವಿಭಾಗ), ಡಾ. ವಿನೀತ್ (ಇಂಟೆನ್ಸಿವಿಸ್ಟ್) ಇವರುಗಳು ಭಾಗವಹಿಸಿದ್ದರು.
ಈ ಕುರಿತು ನಡೆದ ಸುದ್ಧಿಗೋಷ್ಠಿಯಲ್ಲಿ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಹಬೀಬ್ ರೆಹಮಾನ್ ಎ ಎ ಉಪಸ್ಥಿತರಿದ್ದರು.