ಮಂಗಳೂರು, ಫೆ 09 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ ಮುಕ್ತ ಜಿಲ್ಲೆಯ ಅಭಿಯಾನ ನಡೆಯುತ್ತಿದ್ದು, ನಗರ ಹಾಗೂ ಜಿಲ್ಲಾ ಪೊಲೀಸರಿಂದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಪತ್ತೆ ಹಚ್ಚಲಾಗಿತ್ತು. ಕಳೆದ ಒಂದು ವರ್ಷದಲ್ಲಿ 34 ಪ್ರಕರಣದಲ್ಲಿ ಸೀಝ್ ಮಾಡಲಾಗಿದ್ದ ಸುಮಾರು 65 ಲಕ್ಷ ಮೌಲ್ಯದ 220ಕೆಜಿ ಗಾಂಜಾ ಹಾಗೂ 200 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ಇಂದು ಜಿಲ್ಲಾ ಮಾದಕ ವಸ್ತು ವಿಲೇವಾರಿ ಕಮಿಟಿ ಮೂಲಕ ವಿಲೇವಾರಿ ಮಾಡಲಾಯಿತು.
ನ್ಯಾಯಾಲಯದ ಅನುಮತಿ ಪಡೆದು 34 ಪ್ರಕರಣದಲ್ಲಿ ಸೀಝ್ ಮಾಡಲಾಗಿದ್ದ ಸುಮಾರು 65 ಲಕ್ಷ ಮೌಲ್ಯದ 220ಕೆಜಿ ಗಾಂಜಾ ಹಾಗೂ 200 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ನಾಶ ಪಡಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಡ್ರಗ್ ಸಾಗಾಟ, ಮಾರಾಟ ಹಾಗೂ ಡ್ರಗ್ ಸೇವನೆ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಹಲವು ದಾಳಿಗಳನ್ನು ನಡೆಸಿ ಅಪಾರ ಪ್ರಮಾಣದ ಹಲವು ವಿಧದ ಡ್ರಗ್ಗಳನ್ನು ವಶ ಪಡಿಸಿಕೊಂಡು ಹಲವು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಕಳೆದ ಒಂದು ವರ್ಷದಲ್ಲಿ 34 ಪ್ರಕರಣದಲ್ಲಿ ಸೀಝ್ ಮಾಡಲಾಗಿದ್ದ ಸುಮಾರು 65 ಲಕ್ಷ ಮೌಲ್ಯದ 220ಕೆಜಿ ಗಾಂಜಾ ಹಾಗೂ 200 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ನಾಶ ಪಡಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.