ಮಂಗಳೂರು, ಫೆ 08 (DaijiworldNews/MS): ದಕ್ಷಿಣ ಭಾರತದ ರಾಜ್ಯಗಳನ್ನೊಳಗೊಂಡ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿರುವ ಸಂಸದ ಡಿ.ಕೆ. ಸುರೇಶ್ ವಿರುದ್ಧ ನೀಡಲಾಗಿದ್ದ ದೂರನ್ನು ಮಂಗಳೂರಿನ 2ನೇ ಜೆಎಂಎಫ್ಸಿ ನ್ಯಾಯಾಲಯ ಸ್ವೀಕರಿಸಿದ್ದು, ವಿಚಾರಣೆಯನ್ನು ಫೆ. 12ಕ್ಕೆ ಮುಂದೂಡಿದೆ.
ಸುರೇಶ್ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ದೂರುದಾರ, ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ಪರವಾಗಿ ವಕೀಲ ಮೋಹನ್ ರಾಜ್ ಕೆ.ಆರ್. ಬುಧವಾರ ವಾದ ಮಂಡಿಸಿದ್ದರು.
ಸುರೇಶ್ ಸಂಸದರಾಗಿರುವ ಕಾರಣ ಪ್ರಸ್ತುತ ನ್ಯಾಯಾಲಯದ ವ್ಯಾಪ್ತಿ ಬಗ್ಗೆ ಮುಂದಿನ ದಿನಾಂಕದಲ್ಲಿ ವಿಚಾರಣೆ ಸಾಧ್ಯತೆ ಇದೆ. ಸೆಕ್ಷನ್ 124 ಎ ಅಡಿ ಕ್ರಮ ಕೈಗೊಳ್ಳುವಂತೆ ದೂರು ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಮಂಗಳೂರು ಉತ್ತರ ಠಾಣೆಯ ಠಾಣಾಧಿಕಾರಿಗೆ ಆದೇಶಿಸುವಂತೆ ಮನವಿ ಮಾಡಿ ಮಾಡಿದ್ದರು.