ಮಂಗಳೂರು, ಫೆ 08 (DaijiworldNews/PC): ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಬಳಿಕ ಮಂಗಳೂರಿನಿಂದ ಅಯೋಧ್ಯೆಗೆ ಹೋಗುವ ರೈಲಿನ ಬೇಡಿಕೆ ಹೆಚ್ಚಾಗಿದ್ದು ಈಗ ಕೊಯಮತ್ತೂರು-ದರ್ಶನ ನಗರ್-ಕೊಯಮತ್ತೂರು ಆಸ್ತಾ ವಿಶೇಷ ರೈಲಿನ ಸೌಲಭ್ಯ ಕಲ್ಪಿಸಲಾಗಿದೆ.
ಮಂಗಳೂರಿನಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ 06517 ಕೊಯ ಮತ್ತೂರು-ದರ್ಶನ ನಗರ್-ಕೊಯಮತ್ತೂರು ಆಸ್ತಾ ಈ ರೈಲು ತಮಿಳುನಾಡಿನ ಕನ್ಯಾಕುಮಾರಿಯಿಂದ ಫೆ.8 ರಂದು ಹೊರಡಲಿದ್ದು, ಮಂಗಳೂರು ಜಂಕ್ಷನ್ ನಿಲ್ದಾಣದ ಮೂಲಕ ಅಯೋಧ್ಯೆಗೆ ತೆರಳಲಿದೆ.
ಫೆ. 8ರ ಸಂಜೆ 5.50ಕ್ಕೆ ಮಂಗಳೂರು ಜಂಕ್ಷನ್ಗೆ ಆಗಮಿಸಿ, 6ಕ್ಕೆ ತೆರಳಿ, ಫೆ. 11ರಂದು ಮುಂಜಾನೆ ಅಯೋಧ್ಯೆಯ ದರ್ಶನ್ನಗರ ನಿಲ್ದಾಣ ತಲುಪಲಿದೆ. ಫೆ. 12ರಂದು ಬೆಳಗ್ಗೆ 8ಕ್ಕೆ ಅಯೋಧ್ಯೆಯಿಂದ ಹೊರಟು ಫೆ. 14ರ ಸಂಜೆ ಮಂಗಳೂರು ಜಂಕ್ಷನ್ ತಲುಪಲಿದೆ.