ಕಾಸರಗೋಡು, ಫೆ 06 (DaijiworldNews/HR): ನಾಲ್ಕು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಸಹೋದರ ಹಾಗೂ ಸಂಬಂಧಿಕರೋರ್ವರ ಬೆದರಿಕೆ ಇದ್ದುದರಿಂದ ತಪ್ಪಿಸಿ ಕೊಂಡಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಧರ್ಮತ್ತಡ್ಕದ ಜೋನ್ ಡಿ ಸೋಜ (60) ನಾಪತ್ತೆಯಾಗಿದ್ದ ವ್ಯಕ್ತಿ. ಇವರು ಸೋಮವಾರ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಇವರ ಹೇಳಿಕೆಯಂತೆ
ಸಹೋದರ ಜೋರ್ಜ್ ಹಾಗೂ ಸಂಬಂಧಿಕ ಥೋಮಸ್ ವಿರುದ್ಧ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಕಳೆದ ಗುರುವಾರ ದಂದು ಜೋನ್ ಡಿ ಸೋಜ ನಾಪತ್ತೆ ಯಾಗಿದ್ದರು.
ಇನ್ನು ನಾಪತ್ತೆಯಾಗಿದ್ದ ಜೋನ್ ಡಿ ಸೋಜ ಅವರ ಮೊಬೈಲ್ ಫೋನ್ ಮತ್ತು ಸ್ಕೂಟರ್ ಉಪ್ಪಳ ನಯಬಜಾರ್ ಬಳಿಯ ಅಂಬಾರ್ ಎಂಬಲ್ಲಿ ಪತ್ತೆಯಾಗಿತ್ತು. ಪೆರ್ಮುದೆ ತೆರಳುವುದಾಗಿ ಗುರುವಾರ ದಂದು ತೆರಳಿದ್ದ ಇವರು ನಾಪತ್ತೆಯಾಗಿರುವು ದಾಗಿ ಪತ್ನಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದ್ದರು. ಆಸ್ತಿ ವಿವಾದ ಇವರ ನಡುವೆ ವೈಮನಸ್ಸಿಗೆ ಕಾರಣ ಎನ್ನಲಾಗಿದೆ.