ಕಡಬ, ಫೆ 6(DaijiworldNews/SK): ನಕಲಿ 916 ಮಾದರಿಯ ಚಿನ್ನ ಅಡವಿಟ್ಟು ಹಲವು ಸಹಕಾರಿ ಸಂಘಗಳಿಂದ ಸಾಲ ಪಡೆದು ವಂಚಿಸಿದ ಘಟನೆ ನಡೆದಿದೆ.
ವಂಚಕರಾದ ನೆಲ್ಯಾಡಿ ಗ್ರಾಮದಾತ ಎನ್ನಲಾಗಿರುವ ಕಡಬ ನಿವಾಸಿ ಸೆಬಾಸ್ಟಿಯನ್ ಮತ್ತು ಕೇರಳ ಮೂಲದ ಡಾನಿಶ್ ಎಂದು ಗುರುತಿಸಲಾಗಿದೆ. ನೆಲ್ಯಾಡಿ, ಕಡಬ, ಉಪ್ಪಿನಂಗಡಿಯಲ್ಲಿ ನಕಲಿ ಚಿನ್ನವಿಟ್ಟು ಸಾಲಪಡೆದು ಸಹಕಾರಿ ಸಂಘಗಳಿಗೆ ವಂಚಕರು ಲಕ್ಷಗಟ್ಟಲೆ ಪಂಗನಾಮ ಮಾಡಿದ್ದಾರೆ.
ನೆಲ್ಯಾಡಿಯ ಕಾಮಧೇನು ಸಂಘದಲ್ಲಿ ನಕಲಿ ಚಿನ್ನದ ಬಳೆಗಳನ್ನು ಇಟ್ಟು 1.40 ಲಕ್ಷ ಸಾಲ ಪಡೆದಿದ್ದಾರೆ.ಉಪ್ಪಿನಂಗಡಿಯ ಒಡಿಯೂರು ಸಹಕಾರಿ ಸಂಘದಲ್ಲಿ 1.70 ಲಕ್ಷ ಸಾಲ,ಕಡಬದ ಅಲಂಕಾರು ಒಕ್ಕಲಿಗ ಸಹಕಾರಿ ಸಂಘಗಳಲ್ಲೂ ನಕಲಿ ಚಿನ್ನ ಅಡವಿಟ್ಟು 1.35 ಲಕ್ಷ ಸಾಲ ಪಡೆದು ವಂಚಿಸಿದ್ದಾರೆ.
ಆರೋಪಿಗಳ ವಿರುದ್ದ ವಿವಿಧ ಕಡೆಗಳಲ್ಲಿ ದೂರುಗಳು ದಾಖಲಾಗಿದ.ಪ್ರಕರಣದಲ್ಲಿ ಸಂಘಗಳ ಚಿನ್ನಾಭರಣ ಪರಿಶೀಲನಾಗಾರರ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಕಡಬ,ಪುತ್ತೂರು, ಸುಳ್ಯ,ಬೆಳ್ತಂಗಡಿ ತಾಲೂಕುಗಳಲ್ಲಿ ವಂಚನಾ ಪ್ರಕರಣಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.