ಬಂಟ್ವಾಳ, ಫೆ 06 (DaijiworldNews/MS): ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಕಾರಣಕ್ಕಾಗಿ ಜೈಲು ಶಿಕ್ಷೆ ಅನುಭವಿಸಿ, ಬಿಡುಗಡೆಗೊಂಡ ಉತ್ತರ ಪ್ರದೇಶ ಮೂಲದ ಸುಮಾರು 18 ಮಂದಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪ್ರಕರಣವೊಂದರಲ್ಲಿ ಆರೋಪಿತರು ಸುಮಾರು 5 ವರ್ಷಗಳಿಂದ ತಲೆಮರೆಸಿಕೊಂಡಿದ್ದರು.
ಉತ್ತರಪ್ರದೇಶದ ಬಲಿಯಾ ಜಿಲ್ಲೆ ಮತ್ತು ಘಾಜೀಯಾಪುರ ಪೀಯುಶ್ ಕುಮಾರ್,ವಿನಯ್ ಕುಮಾರ್ ,ಬ್ರಿಜಿ ನಾರಾಯಣ ,ರವೀಂದ್ರ, ಕೃಪ ಶಂಕರ್ , ವಿವೇಕ್ ರಾಮ್ , ಬದ್ಧ ರಾಮ್ , ನಂದಿನಿ ರಾಮ್ , ಕಿಶೋರ್ ಕುಮಾರ್ , ಶಾಮ್ ಬಿಹಾರಿ ರಾಮ್ , ಪ್ರೇಮಾಚಂದ ರಾಮ್, ಸತೇಂದ್ರ, ಭಗವಾನ್ ರಾಮ್, ಉಮೇಶ್ ರಾಮ್ , ರಾಸ್ ಬಿಹಾರಿ ರಾಮ್ , ಭಗೀರಥಿ ಚೌಧರಿ ,ಸುನೀಲ್ ರಾಮ್ , ನಂದಿಹಳ ರಾಮ್ ಎಂಬುವರನ್ನು ಪೋಲೀಸರು ಬಂಧಿಸಿದ್ದಾರೆ.
ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ. ಹಾಗೂ ಪೊಲೀಸ್ ಉಪನಿರೀಕ್ಷಕರಾದ ಹರೀಶ್ ಎಂ.ಆರ್ ರವರ ಮಾರ್ಗದರ್ಶನದಲ್ಲಿ ಉಪನಿರೀಕ್ಷಕ ರಾದ ಮೂರ್ತಿ ಹೆಚ್ ಸಿ ಗಣೇಶ್ ಪ್ರಸಾದ್ ಪಿ.ಸಿ ಯೋಗೇಶ್ . ಡಿ.ಎಲ್ ವಿಜಯ್ ಕುಮಾರ್ ಸುರೇಶ್ ಉಪ್ಪಾರರವರು ಉತ್ತರ ಪ್ರದೇಶಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ, ನ್ಯಾಯಾಲಯವು ಸದ್ರಿ ಆರೋಪಿಗಳಿಗೆ ದಂಡ ವಿಧಿಸಿ ಪ್ರಕರಣ ಮುಕ್ತಾಯ ಮಾಡಿದೆ.