ಬ್ರಹ್ಮಾವರ, ಫೆ 6(DaijiworldNews/AK): ಬ್ರಹ್ಮಾವರದ ಖಾಸಗಿ ಸಭಾಂಗಣದಲ್ಲಿ ಭಾನುವಾರ ನಡೆದ ಆರತಕ್ಷತೆ ಕಾರ್ಯಕ್ರಮದ ವೇಳೆ ಮಹಿಳೆಯೊಬ್ಬರ 2,40,000 ಮೌಲ್ಯದ ವಸ್ತುಗಳಿದ್ದ ವ್ಯಾನಿಟಿ ಬ್ಯಾಗ್ ಕಳವುಗೈದು ಪರಾರಿಯಾದ ಆಘಾತಕಾರಿ ಘಟನೆ ನಡೆದಿದೆ.
ಜಯಶ್ರೀ ಸುರೇಶ್ (49) ಅವರು ತಮ್ಮ ವ್ಯಾನಿಟಿ ಬ್ಯಾಗ್ ಅನ್ನು ವೇದಿಕೆಯ ಮೇಲಿರುವ ಕುರ್ಚಿಯ ಮೇಲೆ ಇಟ್ಟು ಫೋಟೋ ತೆಗೆಸಿಕೊಂಡು ಬರಲು ಹೋಗಿದ್ದರು. ಬರುವಷ್ಟರಲ್ಲಿ ಕುರ್ಚಿಯಲ್ಲಿದ್ದ ಬ್ಯಾಗ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.
ಕಳುವಾದ ಬ್ಯಾಗ್ನಲ್ಲಿ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳು ಅಂದಾಜು 2,40,000 ರೂ ಇತ್ತು. ಹಾಲ್ನ ಸಿಸಿಟಿವಿ ಫೂಟೇಜ್ನಲ್ಲಿ ಅಪ್ರಾಪ್ತ ಬಾಲಕ ಕಪ್ಪು ಶರ್ಟ್ನ ಹುಡುಗನೊಂದಿಗೆ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವುದನ್ನು ಸೆರೆಯಾಗಿದೆ.
ಈ ಘಟನೆ ಕುರಿತಂತೆ ಬ್ರಹ್ಮಾವರ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.