ಬಂಟ್ವಾಳ, ಫೆ 05 (DaijiworldNews/MS): ಬಂಟ್ವಾಳ ಬಿಜೆಪಿಯ ಭಿನ್ನಮತಕ್ಕೆ ಪುಷ್ಟಿ ನೀಡುವಂತೆ ಇದೀಗ ಬಂಟ್ವಾಳ ಬಿಜೆಪಿ ಕಚೇರಿಗೆ ಸೋಮವಾರ ಮಧ್ಯಾಹ್ನ 12 ಗಂಟೆವರೆಗೂ ತೆರೆದಿರಲಿಲ್ಲ.
ಒಂದು ಮಾಹಿತಿ ಪ್ರಕಾರ ಇದು ಬಿಜೆಪಿಯ ಕಚೇರಿಯಾಗಿದ್ದರು,ಶಾಸಕರು ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದೆ ಎನ್ನಲಾಗಿದ್ದು, ಹಾಗಾದರೆ ಬಂಟ್ವಾಳ ಬಿಜೆಪಿ ಪಕ್ಷಕ್ಕೆ ಕಚೇರಿಯೇ ಇಲ್ಲದಿರುವುದು ನಾಚಿಕೆಯ ವಿಚಾರ.ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದ ಸಂದರ್ಭದಲ್ಲಿಯಾದರೂ ಸಣ್ಣದೊಂದು ಕಚೇರಿ ಇರುತ್ತಿತ್ತು.ಆದರೆ ಕಳೆದ ಅವಧಿಯಲ್ಲಿ ಸರಕಾರ ಸಹಿತ ಬಿಜೆಪಿ ಶಾಸಕರಿದ್ದು ಈ ಅವಧಿಯಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದರು.ಬಿಜೆಪಿ ಪಕ್ಷಕ್ಕೆ ಕಚೇರಿಮಾಡಲು ಸಾಧ್ಯವಾಗದೆ ಇರುವುದು, ಕಾರ್ಯಕರ್ತರು ಪ್ರಶ್ನಿಸುವಂತಾಗಿದೆ.
ಬೂದಿ ಮುಚ್ಚಿದ ಕೆಂಡದಂತಿದೆ ಬಂಟ್ವಾಳ ಬಿಜೆಪಿ ...
ಬಂಟ್ವಾಳ ಬಿಜೆಪಿಗೆ ನೂತನ ಅದ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಪ್ರಸ್ತುತ ಬಿಜೆಪಿ ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು,ಯಾವ ಸಮಯದಲ್ಲಿ ಅದರೂ ಸ್ಪೋಟಗೊಳ್ಳುವ ಸಾಧ್ಯತೆಗಳಿವೆ.
ಬಿಜೆಪಿಯವರು ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಒಳಗೊಳಗೆ ಭಿನ್ನಮತ ವ್ಯಕ್ತಪಡಿಸುತ್ತಿದ್ದು, ಯಾರು ಕೂಡ ಬಹಿರಂಗ ಹೇಳಿಕೆ ನೀಡುವ ಧೈರ್ಯ ಮಾಡಿಲ್ಲ. ಬಿಜೆಪಿಯ ಒಂದಷ್ಟು ಕಾರ್ಯಕರ್ತರು ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದು, ಇನ್ನು ಒಂದಷ್ಟು ಮಂದಿ, ಸ್ವತಃ ಮಾಧ್ಯಮಗಳಿಗೆ ಕರೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಿನ್ನ ಮತದ ವಿಚಾರವನ್ನು ಬರೆಯುವಂತೆ ಒತ್ತಡ ಹೇರುತ್ತಿದ್ದಾರೆ.
ಅಧ್ಯಕ್ಷರ ಸ್ಪಷ್ಟನೆ
ಬಂಟ್ವಾಳ ಬಿಜೆಪಿ ಕಚೇರಿಗೆ ಬೀಗ ಇಲ್ಲ, ಕಚೇರಿಯ ಸಿಬ್ಬಂದಿ ರಜೆಯಲ್ಲಿರುವ ಕಾರಣ ಕಚೇರಿ ತೆರೆಯುವುದು ವಿಳಂಭವಾಗಿದೆ. ಕಚೇರಿಯ ಬೀಗದ ಕೀ ನನ್ನ ಬಳಿ ಇರುವ ಕಾರಣ ನಾನು ಆಗಮಿಸುವುದು ತಡವಾಗಿದ್ಸು, ಕಚೇರಿ ತೆರೆಯುವುದಿರುವುದಕ್ಕೂ ಅಧ್ಯಕ್ಷ ರ ಆಯ್ಕೆಗೂ ಯಾವುದೇ ಸಂಬಂಧವಿಲ್ಲ ಎಂದು ನಿಕಟ ಪೂರ್ವ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದ್ದಾರೆ.