ಮಂಗಳೂರು, ಎ25(Daijiworld News/SS): ಕರಾವಳಿಯ ಹೆಸರಾಂತ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ವಳಚ್ಚಿಲ್ ಮತ್ತು ಕೊಡಿಯಾಲ್ಬೈಲ್ ಕ್ಯಾಂಪಸ್ನ ವಿದ್ಯಾರ್ಥಿಗಳು ಅಮೆರಿಕದ ಬಾಹ್ಯಾಕಾಶ ಸಂಸ್ಥೆಗೆ (ನಾಸಾ) ಪ್ರವಾಸ ಕೈಗೊಂಡಿದ್ದಾರೆ.
ಬೆಂಗಳೂರಿನ ಟ್ರಾವೆಲ್ ಸಂಸ್ಥೆ ಥಾಮಸ್ ಕುಕ್ ಈ ಪ್ರವಾಸವನ್ನು ಆಯೋಜಿಸಿದ್ದು, ಒಟ್ಟು 44 ಮಂದಿ ವಿದ್ಯಾರ್ಥಿಗಳ ತಂಡ ಅಮೆರಿಕ ಹಾಗೂ ರಾಕೆಟ್ ಕೇಂದ್ರದ ಬಾಹ್ಯಾಕಾಶ ಕ್ಯಾಂಪ್ನಲ್ಲಿ 3 ದಿನಗಳ ತರಬೇತಿ ಪಡೆಯಲಿದ್ದಾರೆ.
ಮಾತ್ರವಲ್ಲ, ಸ್ಯಾನ್ಫ್ರಾನ್ಸಿಸ್ಕೋ, ಫ್ರೆಸ್ನೋ, ಲಾಸ್ವೇಗಸ್, ಲಾಸ್ ಏಂಜೆಲಿಸ್ ಮತ್ತಿತರ ಸ್ಥಳಗಳನ್ನು ವಿದ್ಯಾರ್ಥಿಗಳು ಸಂದರ್ಶಿಸಲಿದ್ದಾರೆ.
ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ| ನರೇಂದ್ರ ಎಲ್. ನಾಯಕ್, ಉಪಾಧ್ಯಕ್ಷೆ ಡಾ| ಉಷಾಪ್ರಭಾ ಎನ್. ನಾಯಕ್ ತಂಡದ ನೇತೃತ್ವ ವಹಿಸಿದ್ದಾರೆ. 14 ದಿನಗಳ ಈ ಶೈಕ್ಷಣಿಕ ಪ್ರವಾಸವನ್ನು ಮುಗಿಸಿ ವಿದ್ಯಾರ್ಥಿಗಳು ಮೇ 6ರಂದು ಮತ್ತೆ ಕಾಲೇಜಿಗೆ ವಾಪಸಾಗಲಿದ್ದಾರೆ.