ಕಡಬ, ಫೆ 04 (DaijiworldNews/HR): ಕಡಬ ತಾಲೂಕಿನ ನೂಜಿ ಬಾಳ್ತಿಲ ಗ್ರಾಮ ಹಾಗೂ ಅಕ್ಕ ಪಕ್ಕದ ಪರಿಸರದಲ್ಲಿ ಕಾಡಾನೆಯ ಹಿಂಡು ಮತ್ತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ಸಾಂದರ್ಭಿಕ ಚಿತ್ರ
ಕಡಬದ ಪುತ್ತಿಗೆ ಶಾಲೆ ಗುಡ್ಡೆಯ ತಿರುವ ಬಳಿ ಇರುವ ಕಾಡಿನಲ್ಲಿ ಮೂರು ಕಾಡಾನೆಗಳು ಇರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.
ಇನ್ನು ಈ ಪ್ರದೇಶದವು ಜನವಸತಿ ಪ್ರದೇಶವಾಗಿದ್ದು, ಕೃಷಿ ಭೂಮಿ ಹೆಚ್ಚಾಗಿರುವ ಕಾರಣ ಆನೆಗಳು ಈ ಭಾಗಕ್ಕೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಕಾಡಿನಿಂದ ಊರಿಗೆ ಬಂದಿರೋ ಆನೆಗಳಿಗೆ ಮತ್ತೆ ಕಾಡಿನಾಚೆ ಹೋಗಲು ಇಲ್ಲಿ ಅಳವಡಿಸಿರುವ ಸೋಲಾರ್ ಬೇಲಿಗಳು ಅಡ್ಡಿಯಾಗಿರುವ ಸಾದ್ಯತೆ ಇದೆ. ಹೀಗಾಗಿ ಕಾಡಿನ ದಾರಿ ಹಿಡಿಯಲು ಆನೆಗಳು ಇಲ್ಲಿ ಸುತ್ತಾಡುತ್ತಿದ್ದು, ರಸ್ತೆಯಲ್ಲಿ ಆನೆಯೊಂದು ನಡೆದಾಡುವ ವಿಡಿಯೋ ಒಂದು ಕಡಬದಲ್ಲಿ ವೈರಲ್ ಆಗಿದೆ.