ಕುಂದಾಪುರ, 02 (DaijiworldNews/AK):ಕುಲಕಸುಬುಗಳು ರಕ್ತಗತವಾಗಿ ಬರುತ್ತದೆ. ಪ್ಲಾಸ್ಟಿಕ್ ಹಾವಳಿಯಿಂದ ಈಗ ಮರಳಿ ಇಂತಹ ಕಲೆಗಳು ಮರಳಿ ಮುನ್ನೆಲೆಗೆ ಬರುತ್ತಿವೆ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಹೇಳಿದರು.
ಕರ್ನಾಟಕ ಕೌಶಾಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ. ಜಿಲ್ಲಾಡಳಿತ, ಉಡುಪಿ, ಐಟಿಡಿಪಿ ಉಡುಪಿ ಹಾಗೂ ಕೊರಗ ಸಂಘಟನೆಗಳು ಉಡುಪಿ ಜಿಲ್ಲೆ ಸಂಯಕ್ತ ಆಶ್ರಯದಲ್ಲಿ ಪಡುಕೋಣೆಯಲ್ಲಿ ನಡೆದ ಬಿದಿರಿನ ಬುಟ್ಟಿ ತಯಾರಿಕಾ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು. ಇಂತಹ ಕಲೆಗಳು ಮಾಡುವರಿದ್ದರೇ ಖಂಡಿತ ಮಾರುಕಟ್ಟೆ ಲಭ್ಯವಾಗುತ್ತದೆ. ಜೀವನಶೈಲಿ ಬದಲಾಗಿದೆ. ಓದು, ಉದ್ಯೋಗ ಅವಕಾಶ ಬಂದಾಗ ಹೋಗುವುದು ಉತ್ತಮ. ಇಂತಹ ಕಲೆಗಳು ಉಪ ಆರ್ಥಿಕ ಮೂಲಗಳು ಆಗಿ ಉಳಿಯುವುದಕ್ಕೆ ಸಾಧ್ಯವಿದೆ. ಕಚ್ಚಾವಸ್ತುಗಳ ಬೆಳೆಸುವುದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಇಲಾಖೆ ಮಟ್ಟದಲ್ಲಿ ಮಾಡುವ ಪ್ರಯತ್ನ ಮಾಡುತ್ತೇವೆ. ಮಾರುಕಟ್ಟೆ ತುಂಬಾ ಇದೆ. ಇಲಾಖೆಯ ಮಟ್ಟದಲ್ಲೂ ಪೂರಕ ವಾತಾವರಣ ಸೃಷ್ಟಿ ಮಾಡುವ ಪ್ರಯತ್ನ ಮಾಡುವುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ನಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾರ್ವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾಡ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೀವ ಪಡುಕೋಣೆ, ಶೋಭಾ, ಮಮತಾ, ಐಟಿಡಿಪಿ ಉಡುಪಿ ಇಲ್ಲಿನ ಅಧಿಕಾರಿ ದೂದ್ ಪಿರ್. ತರಬೇತುದಾರರುಗಳಾದ ಬಾಬು ಹಾಗೂ ದೀಪಾ, ಕೊರಗ ಶ್ರೇಯೋಭಿವೃದ್ಧಿ ಸಂಘ ಕುಂದಾಪುರ ಇಲ್ಲಿನ ಮುಖಂಡರಾದ ಗಣೇಶ ಕುಂಬಾಶಿ, ಸ್ಥಳೀಯ ಪ್ರಮುಖರಾದ ಅರವಿಂದ ಪೂಜಾರಿ ಉಪಸ್ಥಿತರಿದ್ದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕಾರ್ಯಕ್ರಮಕ್ಕೆ ಭೇಟಿ ನೀಡಿದರು.ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆಯ ಅರುಣ್ ಬಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರಾರ್ಥಿಗಳ ಪರವಾಗಿ ಗಣೇಶ್ ಬಾರ್ಕೂರ್ ಮಾತನಾಡಿ, ಕೊರಗ ಸಮುದಾಯದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಕೊರಗ ಸಮುದಾಯದ ಕಸುಬುಗಳು ಉಳಿಯಬೇಕು ಎಂದರು. ಇನ್ನೋರ್ವ ಶಿಬಿರಾರ್ಥಿ ಅಸ್ಮಿತಾ ಮಾತನಾಡಿ, ಇಷ್ಟು ಪಟ್ಟು ಕಲಿತರೆ ಏನೂ ಬರುವುದಿಲ್ಲ. ಕಷ್ಟ ಪಟ್ಟು ಬರೆದರೆ ಏನೂ ಬರಲ್ಲ. ಕುಲಕಸುಬು ಉಳಿಸುವುದು ನಮ್ಮ ಮುಖ್ಯ ಎಂದರು.
ಸುನಂದ, ಚಂದ್ರಕಲಾ, ಸುನೀತ ಕೂಡಾ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿ ಪ್ರತಿ ಕರಕುಶಲಗಳ ನೇಯ್ದೆಗಳಲ್ಲಿ ವ್ಯತ್ಯಾಸವಿದೆ. ಬಾವಿಯೊಳಗಿನ ಕಪ್ಪೆ ತರ ಇದ್ದಿದ್ದೇವು. ಇಂತಹ ಕೌಶಲ ತರಬೇತಿಗಳು ನಮ್ಮ ಸಮುದಾಯಕ್ಕೆ ಸಿಕ್ಕ ಅದೃಷ್ಟ ಎಂದರು.
ತರಬೇತುದಾರರಿಗೆ, ಶಿಬಿರಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಪ್ರಮಾಣ ಪತ್ರ ನೀಡಿದರು. ಜಾತಿ ಪ್ರಮಾಣಪತ್ರ ನೀಡುವುದಕ್ಕೆ ಕೊರಗ ಸಮುದಾಯದವರು ಒತ್ತಾಯಿಸಿದರು. ನಾಗರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.