ಕುಂದಾಪುರ, ನ 16: ಕಾರ್ಟೂನಿಸ್ಟಗಳು ಹೊಸ ದೃಷ್ಟಿಕೋನಹೊಂದಿದ್ದಾರೆ. ನಮಗೆ ಗೊತ್ತಿರುವುದು, ಗೊತ್ತಿಲ್ಲದೆ ಇರುವುದು, ಯಾರಿಗೂ ಗೊತ್ತಿಲ್ಲದೆ ಇರುವುದನ್ನ ವಿಶೇಷ ದೃಷ್ಟಿಕೋನದಲ್ಲಿ ನೋಡಿ ಸರಿಯನ್ನ ಸರಿಯೆಂದು ತಪ್ಪನ್ನ ತಪ್ಪೆಂದು ಹೇಳುವ ಸಮುದಾಯದವರು ಎಂದು ತರಂಗ ವಾರ ಪತ್ರಿಕೆಯ ಸಂಪಾದಕಿ ಡಾ. ಸಂದ್ಯಾ ಪೈ ಹೇಳಿದರು. ಅವರು ಕುಂದಾಪುರದ ಲಕ್ಷ್ಮೀ ನರಸಿಂಹ ಕಲಾಮಂದಿರಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕಾರ್ಟೂನ್ ಹಬ್ಬವನ್ನ ಕ್ಯಾರಿಚೆರ್ ಬಿಡಿಸುವ ಉದ್ಘಾಟಿಸಿ ಮಾತನಾಡಿ, ಕಾರ್ಟೂನ್ ಹಬ್ಬವನ್ನ ಮಾಡುವ ಮೂಲಕ ಕಾರ್ಟೂನ್ಗಳ ಬಗ್ಗೆ ಜನರಿಗೆ ಮಾಹಿತಿ ದೊರಕುತ್ತಿದೆ. ಈ ಮೂಲಕ ಹೊಸ ಕಾರ್ಟೂನಿಸ್ಟಗಳ ಹುಟ್ಟಿಗೆ ಈ ಹಬ್ಬ ಕಾರಣಿಭೂತವಾಗಿದೆ ಎಂದು ಶ್ಲಾಘಿಸಿದರು. ಈ ಸಂದರ್ಭ ಕಾರ್ಟೂನಿಸ್ಟ್ ಗಣೇಶ್ ಹೆಬ್ಬಾರ್ರನ್ನ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಕಾರ್ಯಕ್ರಮ ಸಂಘಟಕ ಸತೀಶ್ ಆಚಾರ್ ಮಾತನಾಡಿ, ಕಾರ್ಟೂನ್ ಹಬ್ಬವೆನ್ನುವುದು ಏಳನೇ ಹಬ್ಬವಾಗಿದ್ದು, ಕುಂದಾಪುರದಲ್ಲಿ ಇದು ನಾಲ್ಕನೇ ಹಬ್ಬ. ಕುಂದಾಪುರಕ್ಕೆ ಕಾರ್ಟೂನಿಸ್ಟ್ಗಳ ಊರೆಂಬ ಪ್ರಖ್ಯಾತಿಯಿದೆ. ಕುಂದಾಪುರದಲ್ಲೇ ೨೯ ಕಾರ್ಟೂನಿಸ್ಟಗಳು ಇದ್ದಾರೆ. ಈ ಸಂಖ್ಯೆಯನ್ನ ಜಾಸ್ತಿ ಮಾಡುವ ಉದ್ದೇಶದಿಂದ ಕಾರ್ಟೂನ್ಗಳ ಬಗ್ಗೆ ಆಸಕ್ತಿ ಮೂಡಿಸಲು ಕಾರ್ಟೂನ್ ಹಬ್ಬವನ್ನ ಆಯೋಜಿಸಲಾಗಿದೆ. ಈ ಬಾರಿ ಸೈಬರ್ ಸ್ವಾಸ್ಥ್ಯದ ಕಳಕಳಿಯೊಂದಿಗೆ ಹಬ್ಬವನ್ನ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನ ನೀಡಿದರು.ವೇದಿಕೆಯಲ್ಲಿ ಪತ್ರಕರ್ತರ ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ್ ಅಜೆಕಾರು, ಶಿಕ್ಷಕ ಮನು ಹಂದಾಡಿ, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ್ ಐತಾಳ್ ಉಪಸ್ಥಿತರಿದ್ದರು.