ಕುಕ್ಕೆ ಸುಬ್ರಹ್ಮಣ್ಯ,ಜ 31(DaijiworldNews/RA):ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ ಚಾರಣಕ್ಕೆ ಫೆಬ್ರವರಿ 1ರಿಂದ ನಿಷೇಧ ಹೇರಲಾಗಿದೆ.
ಮುಂದಿನ ಅಕ್ಟೋಬರ್ ಅಥವಾ ಮುಂದಿನ ಆದೇಶದ ಬಳಿಕ ಆರಂಭವಾಗುವ ಚಾರಣ ಪ್ರವೇಶಕ್ಕೆ ಸಂಪೂರ್ಣ ಆನ್ಲೈನ್ ಬುಕ್ಕಿಂಗ್ ಮೂಲಕವೇ ಪ್ರವೇಶಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಅರಣ್ಯ ಇಲಾಖೆ ಯೋಜನೆ ರೂಪಿಸಲಿದೆ.
ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕುಮಾರ ಪರ್ವತ ಚಾರಣಕ್ಕೆ ಒಂದೇ ದಿನ ಸಾವಿರಕ್ಕಿಂತ ಅಧಿಕ ಸಂಖ್ಯೆಯ ಚಾರಣಿಗರು ಆಗಮಿಸಿದ್ದರು.
ಈ ಬಗ್ಗೆ ಪರಿಸರ ಪ್ರೇಮಿಗಳು ತೀವ್ರ ಅಸಮಾಧಾನ ಹಾಗೂ ಆತಂಕ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಸಾವಿರಾರು ಸಂಖ್ಯೆಯ ಚಾರಣಿಗರ ಆಗಮನದಿಂದ ನಿಯಂತ್ರಣ ಹಾಗೂ ಅರಣ್ಯ ಇಲಾಖೆ ಸಿಬಂದಿಗೆ ತಪಾಸಣೆ ಮಾಡಿ ಬಿಡುವುದು ಸವಾಲಾಗುತ್ತದೆ.
ಈ ನಿಟ್ಟಿನಲ್ಲಿ ಕುಮಾರ ಪರ್ವತ ಚಾರಣವನ್ನು ಮುಂದಿನ ಅವಧಿಯಿಂದ ಆನ್ಲೈನ್ ಬುಕ್ಕಿಂಗ್ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.