ಮಂಗಳೂರು, ಜ 31 (DaijiworldNews/MS): ವಿರೋಧದ ನಡುವೆಯೂ ಯಶವಂತಪುರ – ಮಂಗಳೂರು ಸೆಂಟ್ರಲ್ (ಕಣ್ಣೂರು) ರಾತ್ರಿ ರೈಲು ಕೇರಳದಲ್ಲಿ ಎರಡನೇ ಕಣ್ಣೂರಿನಿಂದ ಕೋಯಿಕ್ಕೋಡ್ ವರೆಗೆ ವಿಸ್ತರಣೆಯಾಗಿದೆ. 2007ರಲ್ಲಿ ಪ್ರಾರಂಭವಾಗಿರುವ ಯಶವಂತಪುರ – ಮಂಗಳೂರು ಸೆಂಟ್ರಲ್ ರೈಲು ಮೊದಲನೇ ಬಾರಿಗೆ 2009 ರಲ್ಲಿ ಮಂಗಳೂರಿನಿಂದ ಕಣ್ಣೂರು ವರೆಗೆ ವಿಸ್ತರಣೆಯಾಗಿತ್ತು.
ವಿಸ್ತರಣೆ ಇಲ್ಲ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸದ ನಳಿನ್ ಕುಮಾರ್ ಅವರಿಗೆ ನೀಡಿರುವ ಭರವಸೆಯ ಹೊರತಾಗಿಯೂ ಈ ವಿಸ್ತರಣೆ ಪ್ರಕ್ರಿಯೆ ನಡೆದಿದೆ.
ಈ ವಿಸ್ತರಣೆಯಿಂದ ಕರಾವಳಿಯ ಪ್ರಯಾಣಿಕರಿಗೆ ಸೀಟ್ ಅಲಭ್ಯತೆಗೆ ಕಾರಣವಾಗಲಿದೆ ಎನ್ನುವುದು ವಿರೋಧಕ್ಕೆ ಪ್ರಮುಖ ಕಾರಣವಾಗಿದೆ. ಕೇರಳಿಗರು ಬೆಂಗಳೂರಿಗೆ ಪ್ರಯಾಣಿಸಲು ಇದೇ ರೈಲನ್ನು ಅವಲಂಬಿಸುವ ಕಾರಣ, ಕಾದಿರಿಸದ ಸೀಟ್ಗಳಿರುವ ಬೋಗಿಗಳು ಮಂಗಳೂರು ತಲುಪುವಾಗಲೇ ಭರ್ತಿಯಾಗಲಿದ್ದು ಹೀಗಾಗಿ ಈ ರೈಲು ಇದ್ದೂ ಕರಾವಳಿಗರಿಗೆ ಪ್ರಯೋಜನಕಾರಿಯಾಗುವುದಿಲ್ಲ ಎನ್ನುವುದು ಹಲವರ ಅಭಿಪ್ರಾಯವಾಗಿದೆ.