ಉಪ್ಪಿನಂಗಡಿ,ಜ 31(DaijiworldNews/RA):ಹೆಲ್ಮೆಟ್ ಕಳ್ಳನೊಬ್ಬನನ್ನು ಬ್ಯಾಂಕ್ ಸಿಬ್ಬಂದಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಬ್ಯಾಂಕ್ ನಲ್ಲಿ ನಡೆದಿದೆ.
ಈ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುವ ಸಂಘದ ಸಿಬಂದಿ ದೇವರಾಜ್ ಎಚ್. ಯು. ಎಂಬವರು ಹೆಲ್ಮೆಟ್ ಕಳೆದುಕೊಂಡವರಾಗಿದ್ದಾರೆ.
ಇವರು ಜನವರಿ ಜ.26ರಂದು ಬೆಳಗ್ಗೆ 9.30ಕ್ಕೆ ಸಂಘದ ಶೆಡ್ ನಲ್ಲಿ ತನ್ನ ಬೈಕ್ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು, ಸಂಜೆ ಬಂದಾಗ ಹೆಲ್ಮೆಟ್ ಕಳವಾಗಿರುವುದು ಕಂಡು ಬಂದಿದೆ.
ಆ ಬಳಿಕ ಸಂಸ್ಥೆಯ ಸಿಸಿಕೆಮರಾ ಪರಿಶೀಲಿಸಿದಾಗ ವ್ಯಕ್ತಿಯೊಬ್ಬರು ಹೆಲ್ಮೆಟ್ ಕಳವುಗೈದಿರುವುದು ತಿಳಿದು ಬಂದಿದೆ.
ಜ. 29ರಂದು ಅದೇ ವ್ಯಕ್ತಿ ಮತ್ತೆ ಬ್ಯಾಂಕ್ ವಠಾರಕ್ಕೆ ಬಂದ ವೇಳೆ ಆತನನ್ನು ಬ್ಯಾಂಕ್ ಸಿಬಂದಿ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಮೊದಲು ಕಳ್ಳತನ ಮಾಡಿಲ್ಲ ಎಂದು ಆ ವ್ಯಕ್ತಿ ವಾದಿಸಿದ್ದರೂ, ಆ ಬಳಿಕ ಒಪ್ಪಿ 9 ಹೆಲ್ಮೆಟ್ ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.