ಕಾಸರಗೋಡು, ಜ 30 (DaijiworldNews/HR): ಕಾಸರಗೋಡು ಪಳ್ಳಂ ರೈಲ್ವೆ ಹಳಿ ಸಮೀಪ ಮಂಗಳವಾರ ಬೆಳಿಗ್ಗೆ ಇಬ್ಬರು ಯುವಕರ ಮೃತದೇಹ ರೈಲು ಬಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಪೈಕಿ ಓರ್ವನ ಗುರುತು ಪತ್ತೆ ಹಚ್ಚಲಾಗಿದೆ.
ನೆಕ್ರಾಜೆ ಪೂಕೈಮೂಲೆಯ ಮುಹಮ್ಮದ್ ಸಹೀರ್(19) ಮೃತಪಟ್ಟವನು.
ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಮೃತ ದೇಹ ಪತ್ತೆಯಾಗಿದ್ದು, ಮೃತದೇಹದ ಸಮೀಪ ನಾಲ್ಕು ಮೊಬೈಲ್ ಫೋನ್ ಗಳು ಪತ್ತೆಯಾಗಿವೆ. ಈ ಪೈಕಿ ಎರಡು ಮೊಬೈಲ್ ಗಳನ್ನು ಇವರು ಕಳವು ಮಾಡಿರುವುದಾಗಿ ಶಂಕಿಸಲಾಗಿದೆ.
ಇನ್ನು ಕಾಸರಗೋಡಿನಿಂದ ಈ ಮೊಬೈಲ್ ಗಳನ್ನು ಕಳವು ಮಾಡಲಾಗಿತ್ತು. ಮೃತ ದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ.
ಬೆಳಿಗ್ಗೆ ಮೃತದೇಹಗಳನ್ನು ಗಮನಿಸಿದ ಪರಿಸರ ವಾಸಿಗಳು ರೈಲ್ವೆ ಹಾಗೂ ಕಾಸರಗೋಡು ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತಲಪಿದ ಪೊಲೀಸರು ಮಹಜರು ನಡೆಸಿದರು. ಇಬ್ಬರ ಗುರುತು ಪತ್ತೆ ಯಾಗಲಿಲ್ಲ. ಮಧ್ಯಾಹ್ನ ಸಹೀರ್ ನ ತಾಯಿ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹದ ಗುರುತು ಪತ್ತೆ ಹಚ್ಚಿದರು. ಪೊಲೀಸರು ನಡೆಸಿದ ತನಿಖೆಯಿಂದ ಇವರ ಮೃತ ದೇಹದ ಸಮೀಪ ಪತ್ತೆಯಾದ ಎರಡು ಮೊಬೈಲ್ ಗಳು ಕಾಸರಗೋಡಿನ ಕ್ವಾಟರ್ಸ್ ವೊಂದರಿಂದ ಕಳವು ಮಾಡಿದ್ದಾಗಿ ಮಾಹಿತಿ ಲಭಿಸಿದೆ.ತಮಿಳ್ನಾಡು ಮೂಲದವರ ಕಾರ್ಮಿಕರು ವಾಸವಾಗಿದ್ದಾರೆ.
ಸೋಮವಾರ ರಾತ್ರಿ ಈ ಮೊಬೈಲ್ ಗಳನ್ನು ಕಳವು ಮಾಡಲಾಗಿತ್ತು. ಮೊಬೈಲ್ ಕಳವು ಬಗ್ಗೆ ತಮಿಳುನಾಡು ನಿವಾಸಿಗಳು ಕಾಸರಗೋಡು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದರ ಬಳಿಕ ರೈಲು ಬಡಿದು ಯುವಕರಿಬ್ಬರು ಮೃತ ಪಟ್ಟ ಘಟನೆ ನಡೆದಿದೆ. ಆದರೆ ಘಟನೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.