ಮಂಗಳೂರು,ಏ24(Daijiworld News/AZM):ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಮಂಗಳೂರು ಇದರ ಅಂಗ ಸಂಸ್ಥೆಯಾಗಿರುವ ಬಿರುವೆರ್ ಕುಡ್ಲ ದುಬಾಯಿ ಘಟಕದ ವತಿಯಿಂದ ಇಂದು ನಾಲ್ಕು ಅರ್ಹ ಬಡ ಕುಟುಂಬಗಳಿಗೆ ಒಟ್ಟು 1.15ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಯಿತು.
ಕೋಡಿಕಲ್ ನಿವಾಸಿ ಯಾದವ್ ಅವರು ಕಳೆದ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಮೂವತ್ತು ಸಾವಿರ ರೂಪಾಯಿ, ವಿದ್ಯಾರ್ಥಿ ನಿಹಾಲ್ ಎಂಬವರ ಶಿಕ್ಷಣಕ್ಕೆ ಇಪ್ಪತ್ತೈದು ಸಾವಿರ ರೂಪಾಯಿ,ಉಡುಪಿ ಕುದ್ಕಲ್ ನಿವಾಸಿ ನಾರಾಯಣ ಆಚಾರ್ಯ ಮತ್ತು ಯತೀಶ್ ಪೂಜಾರಿ ಕುಟುಂಬಕ್ಕೆ ತಲಾ ಮೂವತ್ತು ಸಾವಿರ ರೂಪಾಯಿ ನೆರವು ಹಸ್ತಾಂತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಅವರು ನಮ್ಮದು ರಾಜಕೀಯ ರಹಿತ ತಟಸ್ಥ ಸಂಘಟನೆ, ವಿವಿಧ ಪಕ್ಷದ ಕಾರ್ಯಕರ್ತರ ಕುಟುಂಬಗಳಿಗೆ ,ಅಲ್ಪಸಂಖ್ಯಾತ ,ಹಿಂದುಳಿದ, ಬಂಟ್ಸ್, ಬಿಲ್ಲವ ಸಹಿತ ಎಲ್ಲಾ ಕುಟುಂಬಗಳ ಬಡ ಫಲಾನುಭವಿಗಳನ್ನು ಗುರುತಿಸಿ ಅಗತ್ಯವುಳ್ಳವರಿಗೆ ನೆರವು ಒದಗಿಸಿದ್ದೇವೆ ಇದಕ್ಕೆ ನಮ್ಮ ವಿವಿಧ ಘಟಕದ ಕಾರ್ಯಕರ್ತರು ,ದಾನಿಗಳು ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.
ದುಬಾಯಿ ಘಟಕದ ವಿಘ್ನೇಶ್ ಮಾತನಾಡಿ ನಾವು ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡುವ ಸಮಾನ ಮನಸ್ಕರು ಒಂದಾಗಿ ಬಿರುವೆರ್ ಕುಡ್ಲ ಮೂಲಕ ಬಡ ಕುಟುಂಬಗಳಿಗೆ ಸಹಾಯ ನೀಡುತ್ತಾ ಬರುತ್ತಿದ್ದೇವೆ. ನಾವು ಊರಿಗೆ ಬರುವ ಸಂದರ್ಭ ಫಲಾನುಭವಿಗಳನ್ನು ಗುರುತಿಸಿ ನೀಡುತ್ತೇವೆ. ನೆರವಿಗಾಗಿ ಹಲವಾರು ಮನವಿಗಳು ಬರುತ್ತಾ ಇದ್ದು ಮುಂದೆಯೂ ನಮ್ಮಿಂದಾದಷ್ಟು ನೆರವು ಒದಗಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ದುಬಾಯಿ ಘಟಕದ ಸತೀಶ್ ಉಳ್ಳಾಲ್, ಮನೀಷ್,ಮಿತ್ರನಾಥ್ ಕೋಟ್ಯಾನ್,ಅರವಿಂದ್, ದ.ಕ ಘಕಟದ ಅಧ್ಯಕ್ಷ ರಾಕೇಶ್ ಪೂಜಾರಿ ಬಳ್ಳಾಲ್ಬಾಗ್ ,ಕಿಶೋರ್ ಬಾಬು, ಮಹೇಶ್ ಅಶೋಕನಗರ, ಪ್ರಾಣೇಶ್ ಬಂಗೇರ,ಕಿರಣ್ ಕುಲಾಲ್,ಕಿರಣ್ ಶೆಟ್ಟಿ, ವಜರ್ ಪದವಿನಂಗಡಿ,ಗಣೇಶ್,ಯಶ್ವಿನ್ ಬಳ್ಳಾಲ್ಬಾಗ್ ,ವಿಘ್ನೇಶ್ ಚಿಲಿಂಬಿ ಮತ್ತಿತರರು ಉಪಸ್ಥಿತರಿದ್ದರು.