ಉಡುಪಿ,ಜ 30 (DaijiworldNews/AR):ಮಂಗಳವಾದ ಬೆಳ್ಳಂಬೆಳಗ್ಗೆ ಮಾನಸಿಕ ಶೋಭೆಗೊಂಡು ಉಡುಪಿಯ ಬಲಾಯಿ ಪಾದೆ ಬಳಿಯ ಟ್ರಾನ್ಸ್ಫಾರ್ಮರ್ ಹತ್ತಿ ವಿದ್ಯುತ್ ತಂತಿಯನ್ನು ಮುಟ್ಟಲು ಯತ್ನಿಸುತ್ತಿದ್ದ ಯುವಕನನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸಾರ್ವಜನಿಕರ ಸಹಕಾರದಿಂದ ರಕ್ಷಿಸಿ ಉಡುಪಿಯ ಬಾಳಿಗ ಆಸ್ಪತ್ರೆಗೆ ದಾಖಲಿಸುವ ಮುಖಾಂತರ ಯುವಕನ ಪ್ರಾಣವನ್ನು ಉಳಿಸಿದ್ದಂತಾಗಿದೆ.
ಯುವಕ ಮನೋರೋಗಕ್ಕೆ ತುತ್ತಾದಂತೆ ಕಂಡುಬರುತ್ತಿದ್ದು ಮಂಚಕಲ್ ಹಳೆಯಂಗಡಿ ಪರಿಸರದ ಸೂರಜ್ (28) ಎಂಬ ಮಾಹಿತಿ ನೀಡಿದ್ದಾನೆ. ವಾರಿಸುದಾರರು ಬಾಳಿಗಾ ಆಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಈ ಸಂದರ್ಭದಲ್ಲಿ ಮಲ್ಪೆ ಠಾಣೆ ಎಎಸ್ಐ ತನಿಯ ಹಾಜರಿದ್ದರು. ಪ್ರಕರಣದ ಬಗ್ಗೆ ನಗರ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ವಿಶು ಶೆಟ್ಟಿ ಅವರು ತಿಳಿಸಿದ್ದಾರೆ.