ಕಾರ್ಕಳ,ಜ 29 (DaijiworldNews/MS): ಈದು ಗ್ರಾಮದ ನೂರಾಲ್ ಬೆಟ್ಟು ಎಂಬಲ್ಲಿ ವಿದ್ಯುತ್ ಸರಬರಾಜುನಲ್ಲಿ ಉಂಟಾದ ತಾಂತ್ರಿಕ ಸಮಸ್ಸೆಯನ್ನು ದುರಸ್ಥಿ ಪಡಿಸುತ್ತಿದ್ದಾಗ ವಿದ್ಯುತ್ ಅಘಾತಕ್ಕೊಳಗಾಗಿ ಮೃತಪಟ್ಟ ಲೈನ್ ಮ್ಯಾನ್ ಬಾಗಲಕೋಟೆಯ ಶ್ರೀನಿವಾಸ ಮೃತದೇಹವು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಮಾಜಿ ಇಂಧನ ಸಚಿವ ಹಾಗೂ ಹಾಲಿ ಶಾಸಕ ವಿ.ಸುನೀಲ್ ಕುಮಾರ್ ಅವರು ಮಾಹಿತಿ ತಿಳಿದ ಕೂಡಲೇ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಶ್ರೀನಿವಾಸನ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.
ಮೆಸ್ಕಾಂ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕ ಸುನೀಲ್ ಕುಮಾರ್ ಘಟನೆಯ ಮಾಹಿತಿ ಪಡೆದುಕೊಂಡರು.
ಮೃತನ ಮನೆ ಮಂದಿ ಕಾರ್ಕಳ ಅಗಮಿಸಿದಾಗ ಅವರಿಗೆ ಎಲ್ಲ ರೀತಿಯಲ್ಲಿ ನೆರವಾಗುವಂತೆ ಹಾಗೂ ಸರಕಾರದಿಂದ ಪರಿಹಾರ ದೊರಕಿಸುವಲ್ಲಿ ಅಗತ್ಯ ದಾಖಲೆಗಳನ್ನು ಒಪ್ಪಿಸುವಂತೆ ಶಾಸಕ ಸುನೀಲ್ಇ ಕುಮಾರ್ ಇದೇ ಸಂದರ್ಭದಲ್ಲಿ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ಸುನೀಲ್ ಕುಮಾರ್ ಅವರು ಇಂಧನ ಸಚಿವರಾಗಿದ್ದ ಅವಧಿಯಲ್ಲಿ ಶ್ರೀನಿವಾಸ ಅವರು ಮೆಸ್ಕಾಂ ಇಲಾಖೆಯಲ್ಲಿ ಲೈನ್ ಮ್ಯಾನ್ ಆಗಿ ಸೇರ್ಪಡೆಗೊಂಡಿದ್ದರು.