ಕಾರ್ಕಳ, ಜ 26 (DaijiworldNews/AK):ಹೆಸಾರಾಂತ ಸಂತ, ಸುಪ್ರಸಿದ್ಧ, ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್ ಬಿಸಿಲಿಕದ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಆರನೆ ಹಾಗೂ ಅಂತಿಮ ದಿನದ ಹಬ್ಬದ ದೈವಾರಾಧನೆಯ ಭಕ್ತಿ ಕಾರ್ಯಗಳು ಮತ್ತು ವಿಧಿ-ಆಚರಣೆಗಳನ್ನು ಅಂತ್ಯಂತ ವಿಜೃಂಭಣೆಯಾಗಿ ನೆರವೇರಿಸಲಾಯಿತು.
ಅತ್ತೂರು 'ಸಾಂತ್ಮಾರಿ' ಹೆಸರಾಂತ ಜಾತ್ರೆ 'ಕಾರ್ಲದ ದೇವೆರ್' ಎಂದೇ ಈ ಪುಣ್ಯಸ್ಥಳ ಸುಪ್ರಸಿದ್ಧವಾಗಿದೆ. ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ಮಹೋತ್ಸವದ ಸಲುವಾಗಿ 'ವಿಶ್ವಾಸಭರಿತ ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ' ಎಂಬ ಹಬ್ಬದ ಪ್ರಮುಖ ದಿನದ ವಿಷಯವನ್ನು ಹಾಗೂ ಮಹತ್ವವನ್ನು ಧ್ಯಾನಿಸಲಾಯಿತು. ವಿಶ್ವಾಸಭರಿತ ಪ್ರಾರ್ಥನೆ ಪ್ರತಿಯೊಬ್ಬ ಅಸ್ವಸ್ಥ ಹಾಗೂ ರೋಗಿಯನ್ನು ಗುಣಪಡಿಸುತ್ತದೆ. ವಿಶ್ವಾಸಭರಿತ ಜಪತಪ ನಮ್ಮೆಲ್ಲರನ್ನು ಸಶಕ್ತಗೊಳಿಸುತ್ತದೆ. ಅನಾರೋಗ್ಯದ ಭಕ್ತವಿಶ್ವಾಸಿ ಅಚಲ ವಿಶ್ವಾಸದಿಂದ ಬೇಡಿದಾಗ ಸೌಖ್ಯಹೊಂದುತ್ತಾನೆ. ಆದುದರಿಂದ 'ಶ್ವಾಸ'ವಿರುವ ತನಕ 'ವಿಶ್ವಾಸ'ದಿಂದ ಪ್ರಾರ್ಥಿಸಬೇಕು. ಯಕೋಬನ ಪತ್ರದಿಂದ ಆರಿಸಲ್ಪಟ್ಟಂತಹ ದೈವವಾಕ್ಯ ವಿಶ್ವಾಸಭರಿತ
ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ ಪ್ರವಚನಕ್ಕೆ ಆರಿಸಲ್ಪಟ್ಟ ಪ್ರಮುಖ ಧ್ಯಾನದ ವಿಷಯವಾಗಿತ್ತು.ಹಬ್ಬದ ಆರನೇ ದಿನದಂದು ಜನಸಾಗರವು ವಿವಿಧ ದಿಕ್ಕು ಮೂಲೆಮೂಲೆಗಳಿಂದ ಹರಿದು ಬಂದರು. ಭಕ್ತಾದಿಗಳು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಪಾವನಗೊಂಡರು. ಸಂತರ ಪುಣ್ಯ ಪ್ರತಿಮೆಯ ಮೂರ್ತಿ, ಪವಾಡ ಜಲ ಪುಷ್ಕರಣಿ, ಸಂತರ ಭಾವೈಕ್ಯ ಪವಿತ್ರ ಅವಶೇಷವನ್ನು ಕಂಡರಿತು ಪಾವನಗೊಂಡರು ಹಾಗೂ ಪೂಜೆಯ ಹರಕೆಯನ್ನು ನೆರವೇರಿಸಿ ತಮ್ಮ ದೈವಕಾರ್ಯಗಳನ್ನು ನೆರವೇರಿಸಿದರು.
ಜನಸಾಗರವು ಅತ್ಯಧಿಕ ಸಂಖ್ಯೆಯಲ್ಲಿ ಹರಿದು ಬಂದು ಅತ್ತೂರು ಪುಣ್ಯಕ್ಷೇತ್ರದ ಸುತ್ತಮುತ್ತ ಹಬ್ಬದ ಮೆರುಗು ಹಾಗೂ ಸಂಭ್ರಮದ ವಾತಾವರಣ ಇನ್ನಷ್ಟು ಅದ್ದೂರಿಯಾಗಿ ವರ್ಣಮಯಗೊಂಡಿತು.
ಪಾಲಕ ಸಂತ ಲಾರೆನ್ಸರ ಪ್ರತಿಷ್ಠಾಪಿಸಲಾದ ಪವಾಡ ಮೂರ್ತಿಯ ಬಳಿ ನಿರಂತರ ಜನಸಾಗರ ಭಕ್ತಿಯಿಂದ ಹರಿದು ಬಂದು, ಪ್ರಾರ್ಥಿಸಿ ದೈವಿಕ ಆಶೀರ್ವಾದವನ್ನು ಪಡೆದರು. ವಿವಿಧ ಜನರು ತಮ್ಮ ಹರಕೆ, ಪ್ರಾರ್ಥನೆಯನ್ನು ಸಲ್ಲಿಸಿದರು. ಇಂದು ಗಣರಾಜ್ಯೋತ್ಸವದ ದಿನದಂದು ಸಾವಿರಾರು ಭಕ್ತಜನರು, ಮಕ್ಕಳು ಹಾಗೂ ವ್ಯಾದಿಷ್ಟರು ತಮ್ಮ ವಿವಿಧ ಕೋರಿಗಳನ್ನು ದಿನವಿಡೀ ಸಲ್ಲಿಸಿ ಸಂತೋಷದಿಂದ ಪವಾಡ ಪುರುಷ ಸಂತ ಲಾರೆನ್ಸರ ಆಶೀರ್ವಾದದೊಂದಿಗೆ ಹಿಂತಿರುಗಿದರು.
ವ್ಯಾದಿಷ್ಟರಿಗಾಗಿ ಹಾಗೂ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ತೈಲ ಅಭ್ಯಂಗನ ಹಾಗೂ ತೀರ್ಥಪ್ರೋಕ್ಷವನ್ನು ಮಾಡಲಾಯಿತು. ಪುಣ್ಯಕೇತ್ರದ ಪ್ರಮುಖ ಸ್ಥಳದಲ್ಲಿ ಪ್ರೋಕ್ಷ ತೀರ್ಥ ಹಾಗೂ ಪುಷ್ಪ ತೀರ್ಥವನ್ನು ಜನಸಾಗರಕ್ಕೆ ನೀಡಲಾಯಿತು. ಧನ್ಯತಾ ಭಾವದಿಂದ ಜನರೆಲ್ಲರು ಸ್ವೀಕರಿಸಿ ಸಂತೃಪ್ತರಾದರು.
ವಾರ್ಷಿಕ ಮಹೋತ್ಸವದ ಪ್ರಮುಖ ಸಾಂಭ್ರಾಮಿಕ ಆಡಂಭರದ ಗಾಯನ ಬಲಿಪೂಜೆಯನ್ನು ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಂದತಹ ಪರಮಪೂಜ್ಯ ಲಾರೆನ್ಸ್ ಮುಕ್ಕುಝಿರವರು ನೆರವೇರಿಸಿ ವಿಶ್ವಾಸದ ಪ್ರಾರ್ಥನೆಯ ಕುರಿತಾಗಿ ಬೋಧಿಸಿದರು.
ವಿಶ್ವಾಸದ ಪ್ರಾರ್ಥನೆಯು ರೋಗಿಗಳನ್ನು ಸೌಖ್ಯಗ್ರಸ್ಥರನ್ನಾಗಿ ಮಾಡುತ್ತದೆ. ಪ್ರತೀಯೊಬ್ಬ ಅಸ್ವಸ್ಥ ರೋಗಿಯು ಅಚಲ ವಿಶ್ವಾಸದಿಂದ ನಿರಂತರ ಎಡೆಬಿಡದೆ ಪ್ರಾರ್ಥಿಸಿದಾಗ ಆತ ವಿಮುಕ್ತಿ ಹೊಂದಲು ಮತ್ತು ಗುಣಮುಖನಾಗಲು ಸಾಧ್ಯ. ಶ್ವಾಸದ ಅತ್ಯಗತ್ಯತೆ ಜೀವಿಸಲು ಹಾಗೂ ವಿಶ್ವಾಸದ ಅತ್ಯಗತ್ಯತೆ ಗುಣಮುಖರಾಗಲು ಪೂರಕ ಎಂದರು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಜಗನ್ನಾತ್ ಅತ್ತೂರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ದೈವ ಅನುಗ್ರಹ ಪಡೆದರು.ದಿನದ ಇತರ ಬಲಿಪೂಜೆಗಳನ್ನು ವಂದನೀಯ ಅಶ್ವಿನ್ ಕುಂದಾಪುರ, ಪರಮ ಪೂಜ್ಯ ಡಾ. ಲೊರೆನ್ಸ್ ಮುಕ್ಕುಝಿ, ಬೆಳ್ತಂಗಡಿ ಧರ್ಮಕ್ಷೇತ್ರ, ವಂದನೀಯ ಸುನಿಲ್ ಪಿಂಟೊ, ದಲಂತಬೆಟ್ಟು, ವಂದನೀಯ ಪಿಯುಸ್ ಡಿಸೋಜ, ಶಿವಮೊಗ್ಗ, ವಂದನೀಯ ಅರುಣ್ ಲೋಬೊ, ಮಂಗಳೂರು ಇವರುಗಳು ಅರ್ಪಿಸಿದರು.
ಸರ್ವಧರ್ಮದ ಜನಸಾಗರ ಕೃತಾರ್ಥರಾಗಿ ದೇವರ ದರ್ಶನ ಪಡೆದರು. ಹಲವಾರು ಯಾತ್ರಾರ್ಥಿಗಳು ಪುಣ್ಯಕ್ಷೇತ್ರದಲ್ಲಿ ತಾವು ಹಾಕಿದ ಬೇಡಿಕೆಗಳನ್ನು ಈಡೇರಿಸಲು ಪಾದಯಾತ್ರೆಯಲ್ಲಿ ಧಾವಿಸಿದರು.ದಿನದ ಅಂತಿಮ ಬಲಿಪೂಜೆಯನ್ನು ಸಂಜೆ 5 ಗಂಟೆಗೆ ನೆರವೇರಿಸಿ ಮಹೋತ್ಸವದ ಅಂತಿಮ ದಿನದ ಬಲಿಪೂಜೆಗಳನ್ನು, ಧಾರ್ಮಿಕ ಭಕ್ತಿ- ಆಚರಣೆಗಳನ್ನು ಹಾಗೂ ವಿವಿಧ ಕಾರ್ಯಕ್ರಮಗಳನ್ನು ಭಕ್ತಿಯುತವಾಗಿ ನೇರವೇರಿಸಿ ಮುಕ್ತಾಯಗೊಳಿಸಲಾಯಿತು.
ರಾತ್ರಿ 8 ಗಂಟೆಗೆ ಪುಣ್ಯಕ್ಷೇತ್ರದ ಧ್ವಜವನ್ನು ಅತ್ಯಂತ ಗೌರವಯುತವಾಗಿ ಪುಣ್ಯಕ್ಷೇತ್ರದ ರೆಕ್ಟರ್ ಅ.ವಂ. ಆಲ್ಬನ್ ಡಿ'ಸೋಜರವರ ಅಧೀನತೆಯಲ್ಲಿ ಇಳಿಸಲಾಯಿತು. ಪವಾಡ ಪುರುಷ ಸಂತ ಲೊರೆನ್ನರ ಪ್ರತಿಮೆಯನ್ನು ಹಾಗೂ ಅವಶೇಷ ಸ್ಮಾರಕವನ್ನು ಅತ್ಯಂತ ಭಕ್ತಿಯುತವಾಗಿ ಪ್ರಾರ್ಥನೆ ಗೀತೆ ಸ್ತುತಿಸ್ತೋತ್ರಗಳ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ಹಾಗೂ ಅದರ ಮೂಲ ಸ್ಥಾನದಲ್ಲಿ ಮರಳಿ ಪ್ರತಿಷ್ಟಾಪಿಸಲಾಯಿತು. ಈ ಮೂಲಕ ಜನವರಿ 2024 ರ ಸಂತ ಲೊರೆನ್ಸರ ವಾರ್ಷಿಕ ಹಬ್ಬಕ್ಕೆ ತೆರೆ ಎಳೆಯಲಾಯಿತು.