ಉಡುಪಿ, ಜ 25 (DaijiworldNews/MS): ಎಂಜಿಎಂ ಕಾಲೇಜು , ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಕಾರದಲ್ಲಿ ಸಂಸ್ಕೃತಿವಿಶ್ವ ಪ್ರತಿಷ್ಟಾನದ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯುತ್ತಿರುವ ಸಂಸ್ಕ್ರತಿ ಉತ್ಸವದಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ ಪ್ರಭಾವತಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ 'ವಿಶ್ವಪ್ರಭಾ ಪುರಸ್ಕಾರ 2024' ಪ್ರಧಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಜಯಂತ ಕಾಯ್ಕಿಣಿ ಅವರು "ಕರಾವಳಿಯಲ್ಲಿ ಎಲ್ಲಾ ಕಾರ್ಯಕ್ರಮಗಳೂ ವೈಭವದಿಂದ ನಡೆಯುತ್ತದೆ. ಮನುಷ್ಯರಿಗೆ ಮನುಷ್ಯರೇ ಬೇಡವಾಗಿರುವುದು ಒಂದು ಶಾಪ. ಕಲೆ ಸಂಯುಕ್ತ ವಿಕಸನದ ಮಾರ್ಗವಾಗಿದೆ. ಕಲೆ ಎಲ್ಲರನ್ನೂ ಒಂದುಗೂಡಿಸುವ ಮಾಧ್ಯಮವಾಗಿದೆ. ಸಾಹಿತ್ಯ, ಶಿಕ್ಷಣ, ಜ್ಞಾನ ವರ್ಧನೆಗೆ ಪೂರಕವಾಗಿದೆ" ಎಂದರು.
ಸಾಹಿತಿ ಪ್ರೊ. ಕೆಪಿ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾಕ್ಟರ್ ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂಧನಾ ಭಾಷಣಗೈದರು. ಸಂಸ್ಕೃತಿವಿಶ್ವ ಪ್ರತಿಷ್ಟಾನದ ಸ್ಥಾಪಕ ವಿಶ್ವನಾಥ ಶೆಣೈ, ಪ್ರಭಾ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾಕ್ಟರ್ ಹರಿಶ್ಚಂದ್ರ ಉಪಸ್ಥಿತರಿದ್ದರು.
ವಿಶ್ವಪ್ರಭಾ ಪುರಸ್ಕಾರ ಸಮಿತಿಯ ನಾಗರಾಜ್ ಹೆಬ್ಬಾತ್ ಪ್ರಸ್ತಾವನೆ ಗೈದರು, ಸಂಚಾಲಕ ರವಿರಾಜ್ ಹೆಚ್ ಪಿ ಸ್ವಾಗತಿಸಿ, ಶಿಲ್ಪಾ ಜೋಷಿ ನಿರೂಪಿಸಿದರು.
ಕಾರ್ಯಕ್ರಮದ ಬಳಿಕ ಜಯಂತ ಕಾಯ್ಕಿಣಿ ಯವರ ಜನಪ್ರಿಯ ಸಿನೆಮಾ ಗೀತೆಗಳನ್ನು ಗಾಯಕರಾದ ವಿನುಷ್ ಭಾರಧ್ವಾಜ್, ಮತ್ತು ವಿಜಯಲಕ್ಷ್ಮಿ ಮತ್ತಿನಹೊಳೆ ಪ್ರಸ್ತುತಪಡಿಸಿದರು.
ಇದೇ ಸಂಧರ್ಭದಲ್ಲಿ ಜಯಂತ ಕಾಯ್ಕಿಣಿವರೊಂದಿಗೆ ಅವರ ಸಿನೆಮಾ ಗೀತೆಗಳ ಕುರಿತಾಗಿ ಮಾತುಕತೆ ಕೂಡಾ ನಡೆಯಿತು. ಮಾತುಕತೆಯಲ್ಲಿ ಡಾಕ್ಟರ್ ಸುರೇಶ್ ಶೆಣೈ, ಕವಿ ವಿಲ್ಸನ್ ಕಟೀಲ್, ಸುಶ್ಮಿತಾ ಶೆಟ್ಟಿ, ಮೌದ್ ಜಿಎಂ ಭಾಗವಹಿಸಿದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.