ಮಂಗಳೂರು, ಎ24(Daijiworld News/SS): ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 35.52 ಲಕ್ಷ ರೂ. ಮೌಲ್ಯದ 1.10 ಕೆ.ಜಿ. ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಏರ್ಇಂಡಿಯಾ ಏಕ್ಸ್ಪ್ರೆಸ್ ವಿಮಾನವು ದೋಹಾದಿಂದ ಆಗಮಿಸಿದ್ದ ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಇಬ್ಬರು ಪ್ರಯಾಣಿಕರ ಬಳಿ ಅಕ್ರಮ ಚಿನ್ನ ಪತ್ತೆಯಾಗಿದೆ.
ಓರ್ವ ಪ್ರಯಾಣಿಕನ ಬಳಿ ಸುಮಾರು 14.81ಲಕ್ಷ ರೂ. ಮೌಲ್ಯದ 462.97 ಗ್ರಾಂ ಅಕ್ರಮ ಚಿನ್ನ, ಇನ್ನೋರ್ವ ಪ್ರಯಾಣಿಕನ ಬಳಿ 20.51 ಲಕ್ಷ ರೂ. ಮೌಲ್ಯದ 641 ಗ್ರಾಂ ಅಕ್ರಮ ಚಿನ್ನ ಪತ್ತೆಯಾಗಿದೆ. ಆರೋಪಿಗಳು ಚಿನ್ನವನ್ನು ಪೇಸ್ಟ್ ರೂಪದಲ್ಲಿ ಗುದನಾಳದಲ್ಲಿ ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದರು.
ಇಬ್ಬರು ಪ್ರಯಾಣಿಕರಿಂದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.