ಉಪ್ಪಿನಂಗಡಿ, ಜ 24 (DaijiworldNews/SK): ಉದ್ಯೋಗದ ನೆಪದಲ್ಲಿ ಯುವಕನೋರ್ವನಿಗೆ 2.10 ಲಕ್ಷ ರೂ. ವಂಚಿಸಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಳಿಯೂರು ಗ್ರಾಮದ ನಿವಾಸಿ ಭವಿತ್ ಕೆ.ಎನ್ (23) ಅವರು ಮೆರೈನ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದಾಗ ಸಾಮಾಜಿಕ ಜಾಲತಾಣದ (ಇನ್ಟಾಗ್ರಾಮ್) ಮೂಲಕ ಆರೋಪಿತ ವ್ಯಕ್ತಿ ಪ್ರಜ್ವಲ್ ಪರಿಚಯವಾಗಿದೆ.
ಇವರಿಬ್ಬರು ೨೦೨೩ ರ ಜೂನ್ ೫ ರಂದು ಬೆಂಗಳೂರಿನಲ್ಲಿ ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಪ್ರಜ್ವಲ್ ಮೆರೈನ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಈ ಉದ್ಯೋಗಕ್ಕೆ 3 ಲಕ್ಷ ರೂ. ಖರ್ಚಾಗುತ್ತದೆ ಎಂದು ತಿಳಿಸಿದ್ದ. ಬಳಿಕ ಭವಿತ್ ಖಾತೆಯಿಂದ ಜೂ ೧೮ ರಿಂದ ೨೮ ರ ಅವಧಿಯಲ್ಲಿ ಹಂತ-ಹಂತವಾಗಿ, ಒಟ್ಟು 2.10 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡಿರುತ್ತಾನೆ. ಬಳಿಕ ಪ್ರಜ್ವಲ್, ನಿಮಗೆ ಕೆಲಸ ಮಾಡಿಕೊಡಲು ಆಗುವುದಿಲ್ಲ 10 ದಿವಸದೊಳಗೆ ಹಣವನ್ನು ಹಿಂತಿರುಗಿಸುವುದಾಗಿ ನಂಬಿಸಿ, ಈವರೆಗೆ ಕೆಲಸವನ್ನು ಮಾಡಿಕೊಡದೆ, ಪಡೆದಿರುವ ಹಣವನ್ನೂ ಹಿಂತಿರುಗಿಸದೇ, ಮೋಸ ಮಾಡಿದ್ದಾನೆ ಎಂದು ಭವಿತ್ ದೂರಿನಲ್ಲಿ ತಿಳಿಸಿದ್ದಾರೆ.