ಮಂಗಳೂರು, ಜ 21(DaijiworldNews/AK): ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಫಾದರ್ ರಿಚರ್ಡ್ ಕುವೆಲ್ಲೊ ನಿರ್ದೇಶಕರು, ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳು ಕಂಕನಾಡಿ ಇವರು ಪವಿತ್ರ ದಿವ್ಯ ಬಲಿಪೂಜೆಯನ್ನು ನೇರವೇರಿಸಿದರು.
ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾದ ಅತೀವಂ ಸಿಪ್ರಿಯನ್ ಪಿಂಟೊ ,ಸಹಾಯಕ ಧರ್ಮಗುರುಗಳಾದ ಫಾದರ್ ಸ್ಟೀವನ್ ಕುಟಿನ್ಹಾ , ನಿರ್ಮಲ ಕಾನ್ವೆಂಟ್ ಚಾಪ್ಲಿನ್ ಫಾದರ್ ವಲೇರಿಯನ್ ಪಿಂಟೊ , ವಂ ಸ್ಟೇನಿ ಮೊಂತೇರೊ , ಚಾಪ್ಲಿನ್ ಒಳವಿನ ಹಳ್ಳಿ, ವಂ ಫಾದರ್ ಸಂತೋಷ್ ಮಿನೇಜಸ್ ,ಮುಡಿಪು ಚರ್ಚ್, ವಂ ಫಾದರ್ ಅರುಣ್ ದಿವ್ಯಬಲಿಪುಜೆಯಲ್ಲಿ ಭಾಗವಹಿಸಿದರು. ಚರ್ಚ್ ಪಾಲನ ಪರಿಷದಿನ ಉಪಾಧ್ಯಕ್ಷರಾದ ಅರುಣ್ ಡಿ ಸೋಜಾ ಕಾರ್ಯದರ್ಶಿ , ಜ್ಯೋತಿ ಡಿ ಸೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 2000 ಭಕ್ತಾದಿಗಳು ಭಾಗವಹಿಸಿದ್ದರು.