ಉಡುಪಿ, ಜ 21(DaijiworldNews/AK):ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಹೆಚ್ಚುವರಿ ಪೊಲೀಸ್ ನಿಯೋಜಿಸುವ ಮೂಲಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಹೆಚ್ಚುವರಿ ಬಂದೋಬಸ್ತ್ಗಾಗಿ 2 ಹೆಚ್ಚುವರಿ ಎಸ್ಪಿ, 3 ಡಿಎಸ್ಪಿ, 10 ಇನ್ಸ್ಪೆಕ್ಟರ್ಗಳನ್ನು ನೇಮಿಸಲಾಗಿದೆ.
ಹೆಚ್ಚುವರಿಯಾಗಿ ಉಡುಪಿ ಜಿಲ್ಲೆಯಲ್ಲಿ 47 ಸಬ್ ಇನ್ಸ್ಪೆಕ್ಟರ್ಗಳು, 670 ಪೊಲೀಸರು, 100 ಹೋಮ್ಗಾರ್ಡ್ಗಳು, 3 ಕೆಎಸ್ಆರ್ಪಿ ತುಕಡಿಗಳು ಮತ್ತು 8 ಡಿಎಆರ್ಗಳನ್ನು ನೇಮಿಸಲಾಗಿದೆ.