ಪುತ್ತೂರು, ಜ 20 (DaijiworldNews/HR): 12 ವರ್ಷಗಳ ಹಿಂದೆ ಕ್ರಿಮಿನಲ್ ಒಳಸಂಚು ಮತ್ತು ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಎಂಬಾತನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ನಿವಾಸಿ ಮೋಹನ್ ಕುಮಾರ್ ಹೆಗ್ಡೆ ಯಾನೆ ಮೋಹನ್ (38) ಬಂಧಿತ ಆರೋಪಿ.
ಆರೋಪಿಯನ್ನುಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. 2012 ರಲ್ಲಿ ಕ್ರಿಮಿನಲ್ ಒಳಸಂಚು ಮತ್ತು ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಪ್ರಕರಣ ಕುರಿತಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಾಗಿತ್ತು.
ಆಗ ಆರೋಪಿ ಬಂಧಿತನಾಗಿದ್ದರೂ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದನು.
ಪೊಲೀಸ್ ನಿರೀಕ್ಷಕ ರವಿ ಬಿ ಎಸ್ ಮತ್ತು ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಅವರ ಮಾರ್ಗದರ್ಶನದಲ್ಲಿ, ಹೆಡ್ ಕಾನ್ಸ್ ಟೆಬಲ್ ಮಧು ಕೆ. ಎನ್, ಹಾಗೂ ಹಕೀಂ ಅವರು ಕಾರ್ಯಾಚರಣೆ ನಡೆಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಶುಕ್ರವಾರ ಪುತ್ತೂರಿನಲ್ಲಿ ವಶಕ್ಕೆ ಪಡೆದು ಬಂಧಿಸಿದ್ದಾರೆ.