ಉಡುಪಿ,ಜ 20 (DaijiworldNews/MS): ಬಸ್ ಟೈಮಿಂಗ್ ವಿಚಾರದಲ್ಲಿನ ದ್ವೇಷದಿಂದಾಗಿ ಎರಡು ಬಸ್ ನ ಸಿಬ್ಬಂದಿಗಳ ನಡುವೆ ವಾಗ್ವಾದ, ಚೂರಿ ಇರಿತ ನಡೆದು ಉಡುಪಿ ನಗರ ಠಾಣೆಯಲ್ಲಿ ಇತ್ತಂಡಗಳಿಂದ ದೂರು – ಪ್ರತಿದೂರು ದಾಖಲಾಗಿದೆ.
ಟಿ.ಎಂ.ಟಿ ಮತ್ತು ಜೆ.ಎಂ.ಟಿ ಬಸ್ಸಿನ ಮಧ್ಯೆ ಟೈಂ ವಿಚಾರದಲ್ಲಿಈ ಗಲಾಟೆ ,ಹಲ್ಲೆ ನಡೆದಿದ್ದೂ,
ಈ ಎರಡೂ ಬಸ್ ಸಿಬ್ಬಂದಿಗಳು ಈ ಗಲಾಟೆಯಲ್ಲಿ ಭಾಗಿಯಾಗಿದ್ದು, ಈ ಹಿಂದೆಯೂ ಟೈಂಮಿಂಗ್ ವಿಚಾರದಲ್ಲಿ ವಿವಾದ ಉಂಟಾಗಿತ್ತು.
ದೂರಿನಲ್ಲಿ ಏನಿದೆ?
ಸಂತೋಷ್ ಕುಮಾರ್ ಎಂಬವರು ಮೋಟಾರ್ ಸೈಕಲಿನಲ್ಲಿ ಕೆಲಸದ ಬಗ್ಗೆ ಉಡುಪಿಗೆ ಬಂದಿದ್ದು,ಕೆಲಸ ಮುಗಿಸಿ ಮನೆಗೆ ಹೊರಡುವಾಗ ಬದಲಿ ಚಾಲಕನಾಗಿ ಕೆಲಸ ಮಾಡಿಕೊಂಡಿರುವ ಶಿಶಿರ್ ಪಾಲನ್ ಎಂಬವರು ಸಿಕ್ಕಿದ್ದು, ನಂತರ ಸಂತೋಷ್ ತಮ್ಮ ಮೋಟಾರ್ ಸೈಕಲ್ ನಲ್ಲಿ ಹಾಗೂ ಶಿಶಿರ್ ರವರು ತಮ್ಮ ಪರಿಚಿಯದ ಸ್ಕೂಟಿಯಲ್ಲಿ ಮನೆ ಕಡೆ ಹೋಗುತ್ತಿರುವಾಗ ಸುಮಾರು ಸಮಯ ರಾತ್ರಿ 11:15ಕ್ಕೆ ಉಡುಪಿಯ ಬನ್ನಂಜೆ ನವೀನ್ ಗ್ಯಾರೇಜ್ ಎದುರು, ಪರಿಚಯದ ಸುದೀಪ್ ಮತ್ತು ಹಿಂಬದಿ ಸೀಟಿನಲ್ಲಿದ್ದ ಬುರಾನ್ , ಶಾರುಖ್ ಮತ್ತು ತನ್ವೀರ್ ರವರು ಅಡ್ಡಗಟ್ಟಿದ್ದು , ಹಿಂಬದಿ ಸೀಟಿನಲ್ಲಿದ್ದ ತನ್ವೀರ್ ಮತ್ತು ಶಾರುಖ್ ಏಕಾಏಕಿ ರಿಕ್ಷಾದಿಂದ ಇಳಿದು, ಸಂತೋಷ್ ಕುಮಾರ್ ಮತ್ತು ಶಿಶಿರ್ ರವರಿಗೆ ಕೈಯಿಂದ ಹಲ್ಲೆ ಮಾಡಿ , ಕಾಲಿನಿಂದ ತುಳಿದು ನಂತರ ಕೊಲ್ಲುವ ಉದ್ದೇಶದಿಂದ ಗಟ್ಟಿಯಾಗಿ ಹಿಡಿದುಕೊಂಡಾಗ ಸುದೀಪ್ ಎನ್ನುವವನು ಚೂರಿಯಿಂದ ಶಿಶಿರ್ ಗೆ ಬೆನ್ನಹಿಂದೆ ಚೂರಿಯಿಂದ ಇರಿದಿದ್ದು ,ಅದೇ ಸಮಯದಲ್ಲಿ ಬುರಾನ್ ಎಂಬಾತನು ಬಿಯರ್ ಬಾಟಲಿಯಿಂದ ಸಂತೋಷ್ ಕುಮಾರ್ ರವರಿಗೆ ಬೆನ್ನ ಹಿಂದೆ ಇರಿದಿರುತ್ತಾನೆ. ಈ ಘಟನೆಗೆ ಜನವರಿ 17 ರಂದು ರಾತ್ರಿ ಪರ್ಯಾಯದ ಪ್ರಯುಕ್ತ ಟಿ.ಎಂ.ಟಿ ಮತ್ತು ಜೆ.ಎಂ.ಟಿ ಬಸ್ಸಿನ ಮಧ್ಯೆ ಟೈಂ ವಿಚಾರದಲ್ಲಿ ನಡೆದ ವಾಗ್ವಾದಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟಿದ್ದಕ್ಕೆ ದ್ವೇಷಗೊಂಡು ಈ ಘಟನೆ ನಡೆದಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರತಿದೂರು:
ಇನ್ನು ಘಟನೆಗೆ ಸಂಭಂಧಿಸಿದಂತೆ ಮೊಹಮ್ಮದ್ ಬುರ್ಹಾನ್ ಪ್ರತಿದೂರು ನೀಡಿದ್ದು, ಜನವರಿ 19 ರಂದು ಸಂಜೆ 11 ಗಂಟೆಗೆ ಉಡುಪಿಯ ಬನ್ನಂಜೆ ಬಳಿ ಬುರ್ಹಾನ್ ರವರು ಆಟೋ ರಿಕ್ಷಾದಲ್ಲಿ ಸತೀಶ ಮತ್ತು ಸುದೀಪ್ ರವರೊಂದಿಗೆ ಹೋಗುತ್ತಿದ್ದಾಗ ಆರೋಪಿತರುಗಳು ಸಮಾನ ಉದ್ದೇಶದಿಂದ ಅಕ್ರಮಕೂಟ ಸೇರಿ 4-5 ಬೈಕ್ ಗಳಲ್ಲಿ ಬಂದು ಆಟೋ ರಿಕ್ಷಾದ ಮುಂದೆ ನಿಲ್ಲಿಸಿ, ಆಟೋ ರಿಕ್ಷಾವನ್ನು ನಿಲ್ಲಿಸಿ , ಸುದೀಪ್ ರವರಿಗೆ ಕೈಯಿಂದ ಹಲ್ಲೆ ನಡೆಸಿ , ಬುರ್ಹಾನ್ ರಿಗೆ ಆರೋಪಿ ವಿಖ್ಯಾತನು ಕೈಯಿಂದ ಹೊಡೆದಿದ್ದಲ್ಲದೆ ಸಂತು ಎಂಬವನು ಕಾಲಿನಿಂದ ತುಳಿದಿದ್ದು ,ಶಿಶಿರನು ಫಿರ್ಯಾದುದಾರರಿಗೆ ನಿನ್ನನ್ನು ಇವತ್ತು ಮುಗಿಸಿ ಬಿಡುತ್ತೇವೆ ಎಂಬುದಾಗಿ ಹೇಳಿ ತನ್ನ ಕೈಯಲ್ಲಿದ್ದ ಚೂರಿಯಿಂದ ಫಿರ್ಯಾದುದಾರರ ಬೆನ್ನಿಗೆ ಚುಚ್ಚಿದ್ದು ಗಣೇಶನು ತನ್ನ ಕೈಯಲ್ಲಿದ್ದ ಹೊಡೆದ ಬೀಯರ್ ಬಾಟಲಿಯಿಂದ ಫಿರ್ಯಾದುದಾರರಿಗೆ ಚುಚ್ಚಲು ಹೋದಾಗ ಬುರ್ಹಾನ್ ರವರು ತನ್ನ ಬಲಕೈ ಅಡ್ಡ ಹಿಡಿದಾಗ ದೂರುದಾರಎಅ ಬಲಕೈ ಹೆಬ್ಬರಳಿಗೆ ತಾಗಿ ರಕ್ತ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.