ಕಾಸರಗೋಡು,ಏ 23 (Daijiworld News/MSP): ಕಾಸರಗೋಡು ಲೋಕಸಭಾ ಕ್ಷೇತ್ರದ ಮತದಾನ ಬೆಳಗ್ಗಿನ ಅವಧಿಯಲ್ಲಿ ಮಂದಗತಿಯಲ್ಲಿ ನಡೆಯುತ್ತಿದೆ. ಹಲವಾರು ಮತಗಟ್ಟೆಗಳಲ್ಲಿ ಮತಯಂತ್ರ ದೋಷದಿಂದ ಮತದಾನ ಹಲವು ಗಂಟೆಗಳಷ್ಟು ವಿಳಂಬವಾಯಿತು. ಮತದಾನ ಆರಂಭಕ್ಕೆ ಮೊದಲೇ ಮತದಾರರು ಮತಗಟ್ಟೆಯಲ್ಲಿ ಸರದಿ ಸಾಲಲ್ಲಿ ನಿಂತಿರುವ ದೃಶ್ಯ ಕಂಡುಬಂತು. ಆದರೆ ಮತಯಂತ್ರ ಗಳಲ್ಲಿನ ದೋಷವು ಮತದಾರರಲ್ಲಿ ನಿರಾಶೆ ಮೂಡಿಸಿತು. ಹಲವು ಕಡೆ ಮತಯಂತ್ರ ಗಳ ಜೋಡಣೆ ಅರಿವಿಲ್ಲದೆ ಸಿಬ್ಬಂದಿಗಳನ್ನು ಪರದಾಡುವಂತೆ ಮಾಡಿತು.
ಮತಯಂತ್ರಗಳ ದೋಷದಿಂದ ಮತದಾನ ಪ್ರಮಾಣ ಕುಸಿತವಾಗಲು ಕಾರಣವಾಗಿದೆ ಮೊದಲ ಮೂರು ಗಂಟೆ ಅವಧಿಯಲ್ಲಿ 20.1 ಶೇಕಡಾ ಮತದಾನವಾಗಿದೆ. ಚೇವಾರು 14 ನೇ ನಂಬ್ರದ ಮತಗಟ್ಟೆ ಯಲ್ಲಿ ಒಂದು ಗಂಟೆಗೂ ಅಧಿಕ ಸಮಯ ಮತದಾನ ವಿಳಂಬಗೊಂಡಿತು. ಮಂಜೇಶ್ವರ , ಮಂಗಲ್ಪಾಡಿ , ಮೊಗ್ರಾಲ್ ಪುತ್ತೂರು, ಕಾಸರಗೋಡಿನ ಹಲ ವು ಮತಗಟ್ಟೆಗಳಲ್ಲಿ ಮತದಾನ ವಿಳಂಬವಾಗಿ ಆರಂಭಗೊಂಡಿದ್ದು, ಇದರಿಂದ ಮತದಾನದ ಪ್ರಮಾಣ ಕುಸಿದಿದೆ.
ಎಲ್ ಡಿ ಎಫ್ ಅಭ್ಯರ್ಥಿ ಕೆ. ಪಿ ಸತೀಶ್ಚಂದ್ರನ್ ತ್ರಿಕ್ಕರಿಪುರ ವಲ್ಲಿಕುನ್ನು ಮತಗಟ್ಟೆಯಲ್ಲಿ, ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಕುಂಟಾರು ಎ. ಯು ಪಿ ಶಾಲೆಯಲ್ಲಿ ಬೆಳಿಗ್ಗೆಯೇ ಮತ ಚಲಾಯಿಸಿದರು .
ಬಿಸಿಲಿನ ತಾಪಮಾನ
ಹೆಚ್ಚುತ್ತಿರುವುದರಿಂದ ಮತದಾರರು ಬೆಳಿಗ್ಗೆಯೇ ಮತಚಲಾಯಿಸಲು ತಲಪುತ್ತಿದ್ದು, 12,60,827 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿರುವರು. ಕಳೆದ ಬಾರಿ 78.49 ಮತದಾನವಾಗಿತ್ತು .