ಉಡುಪಿ,ಜ 17 (DaijiworldNews/MS): ಭಾರತದ ಪ್ರಧಾನಿಗಳಾದ ನರೇಂದ್ರ ಮೋದಿಯವರಿಗೆ ಇಂದು ಆಂಧ್ರದ ಲೇಪಾಕ್ಷಿಯಲ್ಲಿ ಶ್ರೀಪುತ್ತಿಗೆ ಮಠದ ಪರ್ಯಾಯದ ಆಮಂತ್ರಣ ಪತ್ರಿಕೆಯನ್ನು ಶ್ರೀಮಠದ ಶಿಷ್ಯರಾದ ತಿರುಪತಿಯ ವೇಂಕಟೇಶ ಹೆಚ್.ಎಸ್ ಅವರು ನೀಡಿದರು.
ಹದಿನಾಲ್ಕು ವರ್ಷಗಳ ಹಿಂದೆ ಶ್ರೀಗಳನ್ನು ಭೇಟಿ ಮಾಡಿದ್ದನ್ನು ನೆನಪಿಸಿಕೊಂಡು ಪರ್ಯಾಯ ಸಂಭ್ರಮಕ್ಕೆ ಅಭಿನಂದನೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಅತ್ಯಂತ ಗೌರವ ಹಾಗೂ ಸಂತೋಷದಿಂದ ಶ್ರೀಮಠದ ಆಮಂತ್ರಣ ಪತ್ರಿಕೆಯನ್ನು ಸ್ವೀಕರಿಸಿದರು . ಸಂದೇಶವನ್ನು ಕಳಿಸುವುದಾಗಿ ತಿಳಿಸಿದರು.