ಕೋಟ, ಜ 16 (DaijiworldNews/MS): ಪ್ರತಿಯೊಂದು ಊರಿನಲ್ಲಿಯೂ ಯುವಕರೇ ಸಂಘಟಿತರಾಗಿ ಮಾಡುವ ಕಾರ್ಯಕ್ರಮಗಳು ಸಮಾಜವನ್ನು ಮುಟ್ಟುತ್ತವೆ ಎನ್ನುವುದಕ್ಕೆ ಕೋಟದಲ್ಲಿ ನಡೆಯುವ ಸ್ಪರ್ಶ ಕಾರ್ಯಕ್ರಮವೇ ಸಾಕ್ಷಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬಾಳೆಬೆಟ್ಟು ಮಣೂರು ಬಾಳೆಬೆಟ್ಟು ಫ್ರೆಂಡ್ಸ್ (ರಿ.)ಬಾಳೆಬೆಟ್ಟು , ಭಗತ್ ಸಿಂಗ್ ಯುವ ವೇದಿಕೆ (ರಿ.)ಕೋಟ ವತಿಯಿಂದ ನಡೆದ "ಸ್ಪರ್ಶ - 2024" ಸಾಮರಸ್ಯದ ಭಾವಕೋಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಚದುರಿಹೋದ ಸಮಾಜಕ್ಕೆ ಯುವಕರ ಸಹಾಯ ಹಸ್ತಗಳ ಅಗತ್ಯವಿದೆ. ಸಮಾಜಮುಖಿ ಚಿಂತನೆಗಳೊಂದಿಗೆ ಯುವಕರು ಸಂಘಟಿತರಾದಲ್ಲಿ ಸಶಕ್ತ ಭಾರತ ಸಂಕಲ್ಪ ನಿಜವಾಗುತ್ತದೆ ಎಂದರು.
ಮಣೂರು ಪಡುಕೆರೆ ಗೀತಾನಂದ ಫೌಂಡೇಶನ್ ಪ್ರರ್ವತಕ ಆನಂದ್ ಸಿ.ಕುಂದರ್ ನೂತನ ಲಾಂಛನ ಅನಾವರಣ ಮಾಡಿದರು. ಸಾಲಿಗ್ರಾಮದ ಪ್ರಖ್ಯಾತ ವೈದ್ಯರು ಡಾ.ಪಿ.ಸಿ ಸುಧಾಕರ್ ಅವರಿಗೆ ಹುಟ್ಟೂರ ಸನ್ಮಾನ ನೀಡಿ ಗೌರವಿಸಲಾಯಿತು. ಕಾಂತಾರ ಚಲನಚಿತ್ರದ ನಟಿ ಸಪ್ತಮಿ ಗೌಡರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಸ್ಥಳೀಯ ಸಮಾಜ ಸೇವಕರು ಮತ್ತು ಕೃಷಿ ಕ್ಷೇತ್ರದ ಸಾಧಕರಾದ ಪ್ರಗತಿಪರ ಕೃಷಿಕ ಶಿವ ಮೂರ್ತಿ ಐತಾಳ್, ಅಣ್ಣಪ್ಪ ಪೂಜಾರಿ, ಗಣೇಶ್ ಕೊರಗ, ರಾಜು ಪೂಜಾರಿ ಬಾಳೆಬೆಟ್ಟು, ಗಣೇಶ್ ಭಂಡಾರಿ ಕೋಟ, ಪ್ರದೀಪ್ ಕುಮಾರ್ ಬಸ್ರೂರು ವಿಶೇಷವಾಗಿ ಅಭಿನಂದಿಸಲಾಯಿತು.
ಪರಿಸರದ ಮಾದರಿ ಸಂಘಟನೆಗಳಾದ ಮಹಿಳಾ ಮಂಡಲ ಕೋಟ, ಮಿತ್ರ ಸಂಘಮ ಬೀಜಾಡಿ-ಗೋಪಾಡಿ, ಉಡುಪಿ ಕಿನಾರ ಮಿನುಗಾರರ ಉತ್ಪಾದಕ ಕಂಪೆನಿ ನಿಯಮಿತ ಗೌರವ ಸಮರ್ಪಣೆ ನೀಡಲಾಯಿತು. ಅಶಕ್ತರಿಗೆ ಸಹಾಯಧನ ಮತ್ತು ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.
ಉಡುಪಿ ಮಾಜಿ ಶಾಸಕ ರಘಪತಿ ಭಟ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉದ್ಯಮಿ ಗಣೇಶ್ ಕಿಣಿ ಬೆಳ್ವೆ, ಬ್ರಹ್ಮಾವರ ಪ್ರಿಯಾ ಅಸೋಸಿಯೆಟ್ಸ್ ಅಕ್ಷತ್ ರಾಜ್, ಕೋಟ ಗ್ರಾ.ಪಂ.ಉಪಾಧ್ಯಕ್ಷ ಪಾಂಡು ಪೂಜಾರಿ, ಕುಶಲ್ ಶೆಟ್ಟಿ, ಉಮೇಶ್ ಪೂಜಾರಿ ಬಾಳೆಬೆಟ್ಟು, ಸಿ.ಎ. ರಾಘವೇಂದ್ರ ಶೆಟ್ಟಿ, ಮಣೂರು ಮಹಾಲಿಂಗ ದೇವಸ್ಥಾನದ ಅಧ್ಯಕ್ಷ ಸತೀಶ್ ಹೆಚ್.ಕುಂದರ್ ಉಪಸ್ಥಿತರಿದ್ದರು.
ಸ್ಥಳೀಯ ನೃತ್ಯ ತಂಡ KDC ಡ್ಯಾನ್ಸ್ ಧಮಾಕ ಮತ್ತು ಅಂಗನವಾಡಿ ಪುಟಾಣಿಗಳ ನೃತ್ಯ ವೈವಿಧ್ಯ, ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕಾಲಮಿತಿ ಯಕ್ಷಗಾನ ಶಿವರಂಜಿನಿ ನಡೆಯಿತು. ಪ್ರಸಾದ ಬಿಲ್ಲವ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.