ಉಳ್ಳಾಲ, ಜ 16 (DaijiworldNews/MS):ಉಳ್ಳಾಲ ಠಾಣಾಗೆ ಡಿವೈಎಫ್ ಐ ಸಂಘಟನೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಜ.16ರ ಮಂಗಳವಾರ ನಡೆದಿದೆ.
ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಭಟ್ ವಿರುದ್ಧ ಪ್ರತಿಭಟಿಸಿದ ಡಿವೈಎಫ್ ಐ ಮುಖಂಡರ ಮೇಲೆ ಪ್ರಕರಣ ದಾಖಲು ಮಾಡಿದ ಹಿನ್ನಲೆಯಲ್ಲಿ ಉಳ್ಳಾಲ ಠಾಣಾಗೆ ಡಿವೈಎಫ್ ಐ ಮುತ್ತಿಗೆ
ಹಾಕಲು ಯತ್ನಿಸಿದೆ. ಈ ವೇಳೆ ಮುಂಜಾಗ್ರತ ಕ್ರಮವಾಗಿ ಠಾಣೆಗೆ ಬೀಗ ಹಾಕಿ ಪೊಲೀಸರು ಸುರಕ್ಷತೆ ನೀಡಿದ ಘಟನೆಯೂ ನಡೆಯಿತು.
ಆರ್ ಎಸ್ಎಸ್ ಹಾಗೂ ಶಾಸಕರ ಚೇಲಾಗಳಂತೆ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಡಿವೈಎಫ್ ಐ ಆರೋಪಿಸಿ ಮಾಸ್ತಿಕಟ್ಟೆಯಿಂದ ಉಳ್ಳಾಲ ಠಾಣೆವರೆಗೆ ರ್ಯಾಲಿ ನಡೆಸಿ ಘೋಷಣೆಗಳೊಂದಿಗೆ ಘೋಷಣೆಗಳೊಂದಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರುಮುತ್ತಿಗೆ ಹಾಕಿಲು ಯತ್ನಿಸಿದರು. ಡಿವೈಎಫ್ ಐ ಪ್ರತಿಭಟನೆ ಹಿನ್ನಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪೊಲೀಸರು ಉಳ್ಳಾಲ ಠಾಣೆಯ ಸುತ್ತಮುತ್ತ ನಿಯೋಜಿಸಲಾಗಿತ್ತು, ಯಾಉದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.