ಉಡುಪಿ, ಜ 16 (DaijiworldNews/HR): ಯಾರೋ ಅಪರಿಚಿತ ವ್ಯಕ್ತಿಗಳು ವಾಟ್ಸ್ಆ್ಯಪ್ನಲ್ಲಿ ಸಂಪರ್ಕಿಸಿ, ಟ್ರೆಡಿಂಗ್ ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಟ್ರೆಡಿಂಗ್ ಆ್ಯಪ್ನ ಲಿಂಕ್ ಕಳುಹಿಸಿ ಸುಮಾರು 1.39 ಕೋಟಿ ರೂ. ವಂಚನೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ಉಡುಪಿಯ ಅಲೆವೂರಿನ ವ್ಯಕ್ತಿಯೊಬ್ಬರಿಗೆ ಎಂಬವರಿಗೆ ಅಪರಿಚಿತ ವ್ಯಕ್ತಿಗಳು ವಾಟ್ಸ್ಆ್ಯಪ್ ಎಪ್ಲಿಕೇಶನ್ ನಲ್ಲಿ ಸಂಪರ್ಕಿಸಿ ಟ್ರೆಡಿಂಗ್ ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಟ್ರೆಡಿಂಗ್ ಆ್ಯಪ್ನ ಲಿಂಕ್ ಕಳುಹಿಸಿದ್ದಾರೆ. ಇದನ್ನು ನಂಬಿದ ದೂರುದಾರ ವ್ಯಕ್ತಿ ಲಿಂಕ್ನಿಂದ Choice Equity Broking Pvt Ltd ಎಂಬ ಆ್ಯಪ್ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ನಮೂದಿಸಿ ನಂತರ ಹಣವನ್ನು ಹೂಡಿಕೆ ಮಾಡಲು ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ರೂಪಾಯಿ 1,38,99,000 ಹಣವನ್ನು ಪಾವತಿಸಿದ್ದಾರೆ.
ಇನ್ನು ದೂರುದಾರರು ಹೂಡಿಕೆ ಮಾಡಿದ ಹಣವನ್ನು ಹಾಗೂ ಲಾಭಾಂಶವನ್ನು ನೀಡದೇ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.