ಉಡುಪಿ, ಜ 15(DaijiworldNews/AK): ಮಕರ ಸಂಕ್ರಾತಿಯ ಅಂಗವಾಗಿ ಜ.15ರಂದು ಹಗಲು ರಥೋತ್ಸವ (ಚೂಣೋರ್ತ್ಸವ) ನಡೆಯಿತು, ಬೆಳಗ್ಗೆ 8.30ಕ್ಕೆ ಮಹಾಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿರಿಸಿ ಪರ್ಯಾಯ ಶ್ರೀಪಾದರ ಸಹಿತ ಅಷ್ಟಮಠದ ಯತಿಗಳು ಮಂಗಳಾರತಿ ಬೆಳಗಿದರು.
ಬ್ರಹ್ಮರಥೋತ್ಸವ ಬಳಿಕ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟ ಮಠದ ಸ್ವಾಮೀಜಿಯವರಿಗೆ ಪರ್ಯಾಯ ಮಠದಿಂದ ಗೌರವ ಸಮರ್ಪಣೆ, ಮಧ್ವ ಸರೋವರದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣದೇವರ ಅವಭೃತೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಪೂಜೆಯ ಬಳಿಕ ರಥದಿಂದ ಪ್ರಸಾದ ಹಾಗೂ ಧನಕನಕಗಳನ್ನು ಸ್ವಾಮೀಜಿಗಳು ಭಕ್ತರತ್ತ ಎಸೆದರು. ರಥದ ಮೇಲೆ ಗರುಡ ಪ್ರದಕ್ಷಿಣೆ ಬಂದ ನಂತರ ಉತ್ಸವ ಆರಂಭವಾಯಿತು.