ಬಂಟ್ವಾಳ, ಏ 22(Daijiworld News/SM): ಕಲ್ಲಡ್ಕ ಸಮೀಪ ಬಾಳ್ತಿಲ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದ ಘಟನೆಯಲ್ಲಿ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಬಹುತೇಕ ಮನೆ ಭಸ್ಮಗೊಂಡಿದೆ.
ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಕಲ್ಲಡ್ಕ ಬಾಳ್ತಿಲ ಗ್ರಾಮದ ದಂಡೆಮಾರು ಕಲ್ಲಪಾಪು ಎಂಬಲ್ಲಿರುವ ಚಂದ್ರಶೇಖರ ನಾಯ್ಕ್ ಹಾಗೂ ಅವರ ಮನೆಮಂದಿ ಸಂಬಂಧಿಕರ ಮದುವೆಗೆಂದು ಬ್ರಹ್ಮರಕೂಟ್ಲುವಿನಲ್ಲಿರುವ ಬಂಟರ ಭವನಕ್ಕೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ.
ಈ ಸಂದರ್ಭ ವಾಸದ ಮನೆ ಮತ್ತು ದಾಸ್ತಾನಿರಿಸಲಾಗಿದ್ದ ಸುಮಾರು 40 ಕ್ವಿಂಟಲ್ ಅಡಿಕೆ ಸುಟ್ಟು ಕರಕಲಾಗಿವೆ. ಬಂಟ್ವಾಳ ಅಗ್ನಿಶಾಮಕದಳದ ತಂಡ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಂಟ್ವಾಳ ತಹಶಿಲ್ದಾರ್ ಸಣ್ಣರಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.