ಕಾರ್ಕಳ, ಜ 14(DaijiworldNews/AK): ಸಂತ ಲಾರೆನ್ಸ್ ಅತ್ತೂರು ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ಹಾಗೂ ಸಂತ ಸಾಬೆಸ್ಟಿಯನ್ ಹಬ್ಬ ಆಚರಣೆಯು ಜನವರಿ 14ರ ಬೆಳಿಗ್ಗೆ 7. 30ಕ್ಕೆ ದಿವ್ಯ ಬಲಿ ಪೂಜೆಯ ಮೂಲಕ ಆಚರಿಸಲಾಯಿತು.ದಿವ್ಯ ಜ್ಯೋತಿ ಸಂಚಾಲಕರಾದ ವಂದನೀಯ ಸಿರಿಲ್ ಲೋಬೊ ಪ್ರಧಾನ ಗುರುಗಳಾಗಿ ಪೂಜೆಯನ್ನು ನೆರವೇರಿಸಿದರು.
ಸಂತ ಸೇಬಸ್ಟಿಯನ್ ನವರ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಬಂದು ಆಶೀರ್ವಚನವನ್ನು ನೀಡಲಾಯಿತು.ಇದೇ ವೇಳೆಗೆ ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವಕ್ಕೆ ಅಧಿಕೃತ ಚಾಲನೆಯನ್ನು ನೀಡಲಾಯಿತು.
ಪಂಚಾಯತ್ ಸದಸ್ಯ ರಾಜೇಶ್, ಸಂತ ಲಾರೆನ್ಸ್ ಬಸಿಲಿಕ ಪುಣ್ಯ ಕ್ಷೇತ್ರದ ಪ್ರಧಾನ ಧರ್ಮ ಗುರು ವಂದನಿಯಾ ಆಲ್ಬನ್ ಡಿಸೋಜ, ಸಹಾಯಕ ಧರ್ಮ ಗುರುಗಳಾದ ಲ್ಯಾರಿ ಪಿಂಟೊ, ಆಧ್ಯಾತ್ಮಿಕ ಧರ್ಮ ಗುರುಗಳಾದ ರೋಮನ್ ಮಸ್ಕೇರೆನ್ಹಸ್ ದಿವ್ಯಜ್ಯೋತಿಯ ನಿರ್ದೇಶಕರಾದ ವಂದನೆಯ ಸಿರಿಲ್ ಲೋಬೊ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಕಾರ್ಯದರ್ಶಿ ರೋನಾಲ್ಡ್ ನೋರೊನ್ಹಾ, 20 ಆಯೋಗದ ಸಂಚಾಲಕಿ ಬೆನ್ನಡಿಕ್ಟ ನೋರೊನ್ಹಾ ಮೊದಲಾದವರು ದೀಪ ಬೆಳಗಿಸುವ ಮೂಲಕ ವಾರ್ಷಿಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ನಿಟ್ಟೆ ಪಂಚಾಯತ್ ಉಪಾಧ್ಯಕ್ಷ ನಿತಿನ್ ಸಾಲಿಯಾನ್ ಮಾತನಾಡಿ , ಅತ್ತೂರಿನ ಜಾತ್ರೆ ನಮ್ಮೂರಿಗೆ ಮಾತ್ರವಲ್ಲ ಹತ್ತೂರಿನ ಜಾತ್ರೆ ಎಂದೇ ಜನಜನಿತವಾಗಿದೆ. ಸರ್ವರ ಸಹಕಾರ ಅಗತ್ಯವೆಂದರು.
ಸಹಾಯಕ ಧರ್ಮಗುರು ವಂದನೆಯ ಲ್ಯಾರಿ ಪಿಂಟೊ ಅವರು ಪ್ರಾರ್ಥನೆಯ ಮೂಲಕ ಆಶೀರ್ವಚನ ನೀಡಿದರು.ಪಾಲನ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ ನೆರವೇರಸಿದುರು.
ಪಾಲನಾ ಮಂಡಳಿ ಕಾರ್ಯದರ್ಶಿ ರೊನಾಲ್ ನೊರೊನ್ಹಾ ಧನ್ಯವಾದ ವಿತ್ತರು. ಅತ್ತೂರು ಚರ್ಚ್ ಪಾಲನಾ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.