ಮಂಗಳೂರು, ಜ 13 (DaijiworldNews/AA): ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.
ಅಬುದಾಭಿ ಮತ್ತು ದುಬೈನಿಂದ ಮಂಗಳೂರಿಗೆ IX816 ಹಾಗೂ IX814 ಎಂಬ ಹೆಸರಿನ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಇಬ್ಬರನ್ನು ತಪಾಸಣೆಗೆ ಒಳಪಡಿಸಿದಾದ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಇವರಿಬ್ಬರಿಂದ 50,93,750 ರೂ. ಮೌಲ್ಯದ 24 ಕ್ಯಾರೆಟ್ ನ 815 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇನ್ನು ಈ ಎರಡು ಪ್ರಕರಣಗಳಲ್ಲಿ ಓರ್ವ ಚಿನ್ನವನ್ನು ಮೂರು ಅಂಡಾಕಾರದ ವಸ್ತುವಿನ ರೂಪದಲ್ಲಿ ಸಾಗಿಸಲು ಪ್ರಯತ್ನಿಸುತ್ತಿದ್ದು, ಇನ್ನೋರ್ವ ಚಿನ್ನವನ್ನು ಪೇಸ್ಟ್ ನ ರೂಪವಾಗಿ ಪರಿವರ್ತಿಸಿ ಚಾಕೊಲೇಟ್ ಬಾಕ್ಸ್ ಗಳಲ್ಲಿ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ.